ADVERTISEMENT

ಬೆಂಗಳೂರಿಗೆ ಬೆಂಟ್‌ ಚೇರ್‌ ಪ್ರವೇಶ

​ಪ್ರಜಾವಾಣಿ ವಾರ್ತೆ
Published 22 ಮೇ 2019, 18:49 IST
Last Updated 22 ಮೇ 2019, 18:49 IST

ಬೆಂಗಳೂರು: ಪೀಠೋಪಕರಣ ಮತ್ತು ಗೃಹಾಲಂಕಾರ ಕ್ಷೇತ್ರದ ಮುಂಚೂಣಿಯ ಬ್ರ್ಯಾಂಡ್‌ ಬೆಂಟ್ ಚೇರ್, ಬೆಂಗಳೂರಿನ ಮಾರುಕಟ್ಟೆ ಪ್ರವೇಶಿಸಿದ್ದು, ಇಂದಿರಾನಗರದಲ್ಲಿ ತನ್ನ ಮಳಿಗೆ ಆರಂಭಿಸಿದೆ.

ರಾಕಿ ಸ್ಟಾರ್ ಹೋಮ್ ಕಲೆಕ್ಷನ್ ಸೇರಿದಂತೆ ಹಲವಾರು ವಿಶಿಷ್ಟ ಬಗೆಯ ಸಂಗ್ರಹಗಳು ಇಲ್ಲಿವೆ. ಗ್ರಾಹಕರು ತಮಗೆ ಇಷ್ಟ
ವಾದ ಉತ್ಪನ್ನ ಆಯ್ಕೆ ಮಾಡಿಕೊಳ್ಳಲು ಮಳಿಗೆ ನೆರವಾಗಲಿದೆ. ‘ಮಳಿಗೆಯಲ್ಲಿ ಸಮಕಾಲೀನ ಶೈಲಿಯ ಅತ್ಯಾಧುನಿಕ ಪೀಠೋಪಕರಣ ಮತ್ತು ಗೃಹಾಲಂಕಾರ ಸರಕುಗಳು ಖರೀದಿಗೆ ಲಭ್ಯ ಇವೆ. ನವೀನ ವಿನ್ಯಾಸದ ಜೊತೆಗೆ ಅತ್ಯುತ್ತಮ ಗುಣಮಟ್ಟ ನಮ್ಮ ಎಲ್ಲಾ ಸಂಗ್ರಹಗಳಲ್ಲಿ ಕಾಣಬಹುದಾಗಿದೆ’ ಎಂದು ಸಂಸ್ಥೆಯ ಸಿಇಒ ನತಾಶಾ ಜೈನ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT