ADVERTISEMENT

ಬಿಗ್‌ ಬಜಾರ್‌ : ಆ.11 ರಿಂದ 15ರವರೆಗೆ ‘ಮಹಾ ಉಳಿತಾಯ’ ಮಾರಾಟ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2018, 18:05 IST
Last Updated 9 ಆಗಸ್ಟ್ 2018, 18:05 IST

ಬೆಂಗಳೂರು: ಫ್ಯೂಚರ್‌ ಗ್ರೂಪ್‌ನ ಸರಣಿ ರಿಟೇಲ್‌ ಮಳಿಗೆ ಬಿಗ್‌ ಬಜಾರ್‌ನ ಐದು ದಿನಗಳ ಮಹಾ ಉಳಿತಾಯ ಮಾರಾಟ ಉತ್ಸವ ಇದೇ 11 ರಿಂದ 15ರವರೆಗೆ ನಡೆಯಲಿದೆ.

ಈ ಬಾರಿಯ ಮಾರಾಟ ಉತ್ಸವ ದೊಡ್ಡ ಪ್ರಮಾಣದಲ್ಲಿ ಇರಲಿದೆ. ಇದೇ ಮೊದಲ ಬಾರಿಗೆ ಬ್ರ್ಯಾಂಡ್‌ ಫ್ಯಾಕ್ಟರಿ, ಸೆಂಟ್ರಲ್‌, ನಿಲಗಿರೀಸ್‌, ಹೆರಿಟೇಜ್‌ ಫ್ರೆಷ್‌ ಮತ್ತು ಫುಡ್‌ವರ್ಲ್ಡ್‌ ಮಳಿಗೆಗಳೂ ‘ಮಹಾ ಉಳಿತಾಯ’ ಮಾರಾಟದ ಭಾಗವಾಗಿರಲಿವೆ.

ಈ ಅವಧಿಯಲ್ಲಿ ₹ 3 ಸಾವಿರವರೆಗಿನ ಖರೀದಿಗೆ ಫ್ಯೂಚರ್‌ ಪೇ ವಾಲೆಟ್‌ ಮತ್ತು ಪೇಟಿಎಂ ಮೂಲಕ ಹಣ ಪಾವತಿಸಿದರೆ ಗ್ರಾಹಕರಿಗೆ ₹ 1,200ರವರೆಗೆ ನಗದು ಮರಳಿಸಲು ನಿರ್ಧರಿಸಲಾಗಿದೆ.

ADVERTISEMENT

‘ಗ್ರಾಹಕರಿಗೆ ಕಿರಿಕಿರಿ ಮುಕ್ತ ಖರೀದಿ ಅನುಭವ ಒದಗಿಸಲು ಬಿಲ್ಲಿಂಗ್‌ ಸೌಲಭ್ಯ ಹೆಚ್ಚಿಸಲಾಗಿದೆ. ಎಲೆಕ್ಟ್ರಾನಿಕ್ಸ್‌, ಗೃಹೋಪಯೋಗಿ ಸಲಕರಣೆ, ಆಹಾರ, ದವಸ ಧಾನ್ಯ, ಫ್ಯಾಷನ್‌ ವಸ್ತ್ರ, ಅಡುಗೆ ಮನೆ ಪರಿಕರ, ಗೃಹ ಅಲಂಕಾರ ಸರಕುಗಳು ‘ಮಹಾ ಉಳಿತಾಯ ಮಾರಾಟ’ದಲ್ಲಿ ಸೇರ್ಪಡೆಯಾಗಿರುತ್ತವೆ ಎಂದು ಸಂಸ್ಥೆಯ ಸಿಇಒ ಸದಾಶಿವ ನಾಯಕ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.