ADVERTISEMENT

ಜಾಗ್ವಾರ್‌: 4,500 ಉದ್ಯೋಗ ಕಡಿತ

ಏಜೆನ್ಸೀಸ್
Published 10 ಜನವರಿ 2019, 20:15 IST
Last Updated 10 ಜನವರಿ 2019, 20:15 IST

ಲಂಡನ್‌: ಜಾಗತಿಕ ಮಟ್ಟದಲ್ಲಿ ಒಟ್ಟಾರೆ 4,500 ಮಂದಿಯನ್ನು ಉದ್ಯೋಗದಿಂದ ಕೈಬಿಡುವುದಾಗಿ ಜಾಗ್ವಾರ್‌ ಲ್ಯಾಂಡ್‌ ರೋವರ್‌ ಕಂಪನಿ ತಿಳಿಸಿದೆ.

ಚೀನಾದಲ್ಲಿನ ಮಾರಾಟ ಇಳಿಕೆ ಹಾಗೂ ಬ್ರೆಕ್ಸಿಟ್‌ ಬಳಿಕ ಬ್ರಿಟನ್‌ನಲ್ಲಿ ಸ್ಪರ್ಧೆ ಎದುರಿಸಬೇಕಾಗುವ ಆತಂಕದಿಂದ ಈ ನಿರ್ಧಾರ ತೆಗೆದುಕೊಂಡಿದೆ.

ಉದ್ಯೋಗ ಕಡಿತದ ಬೆನ್ನಲ್ಲೇ ವಹಿವಾಟು ವಿಸ್ತರಣೆ ಮಾಡಿಕೊಳ್ಳುವ ಬಗ್ಗೆ ಪರಿಶೀಲನೆ ನಡೆಸುತ್ತಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ. 2018ರಲ್ಲಿ ಕಂಪನಿ 1,500 ಉದ್ಯೋಗ ಕಡಿತ ಮಾಡಿತ್ತು.

ADVERTISEMENT

***
ಮಾರುತಿ ಬೆಲೆ ಏರಿಕೆ
ನವದೆಹಲಿ (ಪಿಟಿಐ):
ಮಾರುತಿ ಸುಜುಕಿ ಇಂಡಿಯಾ ಕಂಪನಿ ತಕ್ಷಣದಿಂದ ಜಾರಿಗೆ ಬರುವಂತೆ ಕೆಲವು ಮಾದರಿಗಳ ಬೆಲೆಯನ್ನು ಗರಿಷ್ಠ ₹ 10 ಸಾವಿರದವರೆಗೂ ಏರಿಕೆ ಮಾಡಿದೆ.

ತಯಾರಿಕಾ ವೆಚ್ಚದಲ್ಲಿನ ಹೆಚ್ಚಳ ಮತ್ತು ವಿದೇಶಿ ವಿನಿಮಯದಲ್ಲಿ ಏರಿಕೆಯಿಂದ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ತಿಳಿಸಿದೆ.

ಕಂಪನಿ ₹ 2.53 ಲಕ್ಷದಿಂದ ₹ 11.45 ಲಕ್ಷದವರೆಗಿನ ಬೆಲೆಯ ವಾಹನಗಳನ್ನು ಮಾರಾಟ ಮಾಡುತ್ತಿದ್ದು, ಗುರುವಾರದಿಂದ ಬೆಲೆಯಲ್ಲಿ ಏರಿಕೆಯಾಗಲಿದೆ.

***
ಸ್ಟಾರ್ಟ್‌ಅಪ್‌ಗೆ ನೆರವು
ಬೆಂಗಳೂರು:
ಇಂಧನ ಕ್ಷೇತ್ರದಲ್ಲಿನ ಉದ್ಯಮಿಗಳನ್ನು ಪಾಲುದಾರರನ್ನಾಗಿ ಮಾಡಿಕೊಂಡು ಅವರನ್ನು ಆರ್ಥಿಕವಾಗಿ ಸಬಲಗೊಳಿಸಲು ಶೆಲ್‌ ಕಂಪನಿಯು ಎಂಟು ಸ್ಟಾರ್ಟ್‌ಅಪ್‌ಗಳನ್ನು ಆಯ್ಕೆ ಮಾಡಿಕೊಂಡಿದೆ.

ಈ ನವೋದ್ಯಮಗಳಿಗೆ ಬೆಂಗಳೂರಿನ ಶೆಲ್‌ ತಂತ್ರಜ್ಞಾನ ಕೇಂದ್ರವು ಅಗತ್ಯ ನೆರವು ನೀಡಲಿದೆ. ಇ-ಮೊಬಿಲಿಟಿ, ಡಿಜಿಟಲ್, ನವೀಕರಿಸಬಹುದಾದ ಇಂಧನ, ತ್ಯಾಜ್ಯದಿಂದ ಇಂಧನ ತಯಾರಿಕೆ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿನ ನವೋದ್ಯಮಗಳ ಮಧ್ಯೆ ಸಂವಹನ ಮೂಡಿಸಿ ಸಶಕ್ತಗೊಳಿಸುವುದು ಈ ನೆರವು ಕಾರ್ಯಕ್ರಮದ ಉದ್ದೇಶವಾಗಿದೆ.

**
ಟೈಟಾನ್‌ಗೆ ಪ್ರಮಾಣಪತ್ರ
ಬೆಂಗಳೂರು:
ಇಂಧನ ಮತ್ತು ಪರಿಸರ ಸಂರಕ್ಷಣೆ ವಿಷಯದಲ್ಲಿ ಕೈಗೊಂಡ ಕ್ರಮಗಳಿಗೆ ಟೈಟಾನ್ ಕಂಪನಿಗೆ ಪ್ರಮಾಣಪತ್ರ ಲಭಿಸಿದೆ.

ಗ್ರೀನ್ ಬಿಸಿನೆಸ್ ಸರ್ಟಿಫೀಕೇಷನ್ ಐಎನ್‍ಸಿ (ಜಿಬಿಸಿಐ) ನೀಡಿರುವ ಅತ್ಯುನ್ನತ ಪ್ರಮಾಣೀಕರಣ ಇದಾಗಿದೆ. ಕಾರ್ಬನ್ ಪ್ರಮಾಣ ಹೊರಸೂಸುವಿಕೆ ತಗ್ಗಿಸಲು ಸಂಸ್ಥೆಯು ನಿರಂತರವಾಗಿ ಒತ್ತು ನೀಡುತ್ತಲೆ ಬಂದಿದೆ. ತನ್ನ ಎಲ್ಲ ಕಚೇರಿಗಳಲ್ಲಿಯೂ ಪರಿಸರ ಸ್ನೇಹಿಯಾದ ಸುಸ್ಥಿರ ಅಭಿವೃದ್ಧಿ ಕ್ರಮಗಳಿಗೆ ಈ ಪ್ರಮಾಣಪತ್ರ ಲಭಿಸಿದೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.