ADVERTISEMENT

ಬಾಷ್‌ಗೆ ₹ 1,598 ಕೋಟಿ ನಿವ್ವಳ ಲಾಭ

​ಪ್ರಜಾವಾಣಿ ವಾರ್ತೆ
Published 21 ಮೇ 2019, 17:23 IST
Last Updated 21 ಮೇ 2019, 17:23 IST
ಸೌಮಿತ್ರ ಭಟ್ಟಾಚಾರ್ಯ
ಸೌಮಿತ್ರ ಭಟ್ಟಾಚಾರ್ಯ   

ಬೆಂಗಳೂರು: ವಾಹನ ಬಿಡಿಭಾಗ ತಯಾರಿಕೆ ಹಾಗೂ ತಂತ್ರಜ್ಞಾನ ಸೇವಾ ಸಂಸ್ಥೆ ಬಾಷ್ ಇಂಡಿಯಾ, 2018-19ರ ಹಣಕಾಸು ವರ್ಷದಲ್ಲಿ ₹ 1,598 ಕೋಟಿ ನಿವ್ವಳ ಲಾಭ ಗಳಿಸಿದೆ.

ಹಿಂದಿನ ಹಣಕಾಸು ವರ್ಷದಲ್ಲಿನ ₹1,370.72 ಕೋಟಿ ನಿವ್ವಳ ಲಾಭಕ್ಕೆ ಹೋಲಿಸಿದರೆ ಶೇ 16.58ರಷ್ಟು ಹೆಚ್ಚಳ ದಾಖಲಾಗಿದೆ.

‘ಮಾರ್ಚ್‌ ಅಂತ್ಯಕ್ಕೆ ಕೊನೆಗೊಂಡ ನಾಲ್ಕನೆ ತ್ರೈಮಾಸಿಕದಲ್ಲಿನ ನಿವ್ವಳ ಲಾಭವು ₹411.70 ಕೋಟಿಗಳಷ್ಟಾಗಿದೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿನ ₹ 433.78 ಕೋಟಿಗೆ ಹೋಲಿಸಿದರೆ ಶೇ 5.09ರಷ್ಟು ಕಡಿಮೆಯಾಗಿದೆ. ಇದಕ್ಕೆ ಮಾರಾಟದಲ್ಲಿನ ಇಳಿಕೆ ಮತ್ತು ಪೂರಕವಲ್ಲದ ಕರೆನ್ಸಿ ವಿನಿಮಯ ದರ ಕಾರಣವಾಗಿದೆ. ಸುಸ್ಥಿರ ಮತ್ತು ಲಾಭದಾಯಕ ಬೆಳವಣಿಗೆ ಸಾಧಿಸಲು ಗಮನ ಕೇಂದ್ರೀಕರಿಸಲಾಗಿದೆ’ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಸೌಮಿತ್ರ ಭಟ್ಟಾಚಾರ್ಯ ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

ADVERTISEMENT

ಲಾಭಾಂಶ ಘೋಷಣೆ: ಹಣಕಾಸು ಸಾಧನೆ ಪರಿಗಣಿಸಿರುವ ನಿರ್ದೇಶಕ ಮಂಡಳಿಯು, ಪ್ರತಿ ಷೇರಿಗೆ ₹ 105ರಂತೆ ಲಾಭಾಂಶ ನೀಡಲು ಶಿಫಾರಸು ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.