ADVERTISEMENT

ಬಿಪಿಸಿಎಲ್‌ಗೆ ಬಿಡ್: ಗಡುವು ಇಂದು ಕೊನೆ

ಪಿಟಿಐ
Published 15 ನವೆಂಬರ್ 2020, 21:10 IST
Last Updated 15 ನವೆಂಬರ್ 2020, 21:10 IST

ನವದೆಹಲಿ: ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್‌ನ (ಬಿಪಿಸಿಎಲ್‌) ಖರೀದಿಗೆ ಆರಂಭಿಕ ಬಿಡ್ ಸಲ್ಲಿಸುವ ಗಡುವು ಸೋಮವಾರ ಕೊನೆಗೊಳ್ಳಲಿದೆ. ಬ್ರಿಟನ್ನಿನ ಬಿಪಿ, ಫ್ರಾನ್ಸ್‌ನ ಟೊಟಲ್ ಮತ್ತು ಸೌದಿ ಅರೇಬಿಯಾದ ಸೌದಿ ಆರಾಮ್ಕೊ ಕಂಪನಿಗಳು ಬಿಡ್ ಮಾಡುವ ಸಾಧ್ಯತೆಗಳು ಕಡಿಮೆ ಎನ್ನಲಾಗಿದೆ.

ಬಿಪಿಸಿಎಲ್‌ನಲ್ಲಿ ತಾನು ಹೊಂದಿರುವ ಅಷ್ಟೂ ಷೇರುಗಳನ್ನು (ಶೇಕಡ 52.98ರಷ್ಟು) ಸರ್ಕಾರ ಮಾರಾಟ ಮಾಡಲಿದೆ. ರಷ್ಯಾದ ರೊಸ್‌ನೆಫ್ಟ್‌ ಕೂಡ ಬಿಡ್ ಸಲ್ಲಿಸಲು ಆಸಕ್ತಿ ತೋರಿಸಿಲ್ಲ ಎಂದು ಮೂಲಗಳು ಹೇಳಿವೆ. ಸಾಂಪ್ರದಾ
ಯಿಕ ಇಂಧನಕ್ಕೆ ಕೋವಿಡ್–19 ಪಿಡುಗಿನ ಕಾರಣದಿಂದಾಗಿ ಸ್ಥಿರವಾದ ಬೇಡಿಕೆ ಇಲ್ಲದಿರುವುದರಿಂದ, ಬಿಪಿಸಿಎಲ್‌ ಕಂಪನಿಯನ್ನು ಖರೀದಿಸುವುದರಿಂದ ಲಾಭ ಇದೆಯೇ ಎಂಬ ಪ್ರಶ್ನೆ ಹೂಡಿಕೆದಾರರನ್ನು ಕಾಡುತ್ತಿದೆ ಎಂದು ಮೂಲವೊಂದು ಹೇಳಿದೆ.

ಸಾಂಪ್ರದಾಯಿಕ ಇಂಧನ ಕ್ಷೇತ್ರದಲ್ಲಿ ದೊಡ್ಡ ಹೂಡಿಕೆ ಹೊಂದಿರುವ ರಿಲಯನ್ಸ್ ಇಂಡಸ್ಟ್ರೀಸ್‌ ಲಿಮಿಟೆಡ್‌, ಬಿಪಿಸಿಎಲ್‌
ಅನ್ನು ಸ್ವಾಧೀನ ಮಾಡಿಕೊಂಡರೆ ಅದು ರಿಲಯನ್ಸ್‌ಗೆ ಲಾಭ ತಂದುಕೊಡಬಲ್ಲದು ಎಂದು ಮೂಲವು ಹೇಳಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.