ADVERTISEMENT

ಮಹೀಂದ್ರ ಇ.ವಿ. ಕಂಪನಿಯಲ್ಲಿ ಬಿಐಐ ಹೂಡಿಕೆ

ಪಿಟಿಐ
Published 8 ಜುಲೈ 2022, 15:50 IST
Last Updated 8 ಜುಲೈ 2022, 15:50 IST

ನವದೆಹಲಿ: ಮಹೀಂದ್ರ ಆ್ಯಂಡ್ ಮಹೀಂದ್ರ ಸಮೂಹದ ವಿದ್ಯುತ್ ಚಾಲಿತ ವಾಹನ (ಇ.ವಿ.) ಕಂಪನಿಯಲ್ಲಿ ಬ್ರಿಟಿಷ್ ಇಂಟರ್‌ನ್ಯಾಷನಲ್ ಇನ್ವೆಸ್ಟ್‌ಮೆಂಟ್‌ (ಬಿಐಐ) ಸಂಸ್ಥೆಯು ₹ 1,925 ಕೋಟಿ ಹೂಡಿಕೆ ಮಾಡಲಿದೆ.

ಎರಡೂ ಸಂಸ್ಥೆಗಳ ನಡುವಿನ ಒಪ್ಪಂದದ ಪ್ರಕಾರ, ಇ.ವಿ. ವಾಹನಗಳನ್ನು ತಯಾರಿಸುವ ಹೊಸ ಕಂಪನಿಯಲ್ಲಿ 2024ರಿಂದ 2027ರ ನಡುವೆ ಒಟ್ಟು ₹ 8 ಸಾವಿರ ಕೋಟಿ ಹೂಡಿಕೆ ಆಗಲಿದೆ.

ಮಹೀಂದ್ರ ಆ್ಯಂಡ್‌ ಮಹೀಂದ್ರ ಹಾಗೂ ಬಿಐಐ ತಲಾ ₹ 1,925 ಕೋಟಿ ಹೂಡಿಕೆ ಮಾಡಲಿವೆ. ಹೊಸ ಕಂಪನಿಯು ಇ.ವಿ. ಪ್ರಯಾಣಿಕ ವಾಹನಗಳ ತಯಾರಿಕೆಗೆ ಗಮನ ಕೊಡಲಿದೆ.

ADVERTISEMENT

ಬಿಐಐ ಸಂಸ್ಥೆಯು ಪ್ರವರ್ಧಮಾನಕ್ಕೆ ಬರುತ್ತಿರುವ ಅರ್ಥ ವ್ಯವಸ್ಥೆಗಳಲ್ಲಿನ ಒಟ್ಟು 1,300ಕ್ಕೂ ಹೆಚ್ಚಿನ ಕಂಪನಿಗಳಲ್ಲಿ ಹೂಡಿಕೆ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.