ADVERTISEMENT

ಇಂಡಿಯಾ ಪೋಸ್ಟ್ ಪೇಮೆಂಟ್ಸ್‌ ಬ್ಯಾಂಕ್‌ಗೆ ಕೇಂದ್ರದ ನೆರವು

ಪಿಟಿಐ
Published 27 ಏಪ್ರಿಲ್ 2022, 10:56 IST
Last Updated 27 ಏಪ್ರಿಲ್ 2022, 10:56 IST
   

ನವದೆಹಲಿ: ಇಂಡಿಯಾ ಪೋಸ್ಟ್ ಪೇಮೆಂಟ್ಸ್‌ ಬ್ಯಾಂಕ್‌ಗೆ (ಐಪಿಪಿಬಿ) ₹ 820 ಕೋಟಿ ನೆರವು ಒದಗಿಸಲು ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿದೆ ಎಂದು ಮೂಲಗಳು ತಿಳಿಸಿವೆ.

ಈ ನೆರವಿನಿಂದಾಗಿ ಗ್ರಾಮೀಣ ಪ್ರದೇಶಗಳಲ್ಲಿ ಚಟುವಟಿಕೆ ವಿಸ್ತರಿಸಲು ಐಪಿಪಿಬಿಗೆ ಅನುಕೂಲ ಆಗಲಿದೆ. ಐಪಿಪಿಬಿ ಈಗ ಐದು ಕೋಟಿಗೂ ಹೆಚ್ಚು ಗ್ರಾಹಕರನ್ನು, 1.36 ಲಕ್ಷ ಶಾಖೆಗಳನ್ನು ಹೊಂದಿದೆ. ಇಲ್ಲಿನ ಖಾತೆಗಳಲ್ಲಿ ಸರಿಸುಮಾರು ಶೇಕಡ 48ರಷ್ಟು ಖಾತೆಗಳು ಮಹಿಳೆಯರದ್ದು.

ಹಣಕಾಸಿನ ಒಳಗೊಳ್ಳುವಿಕೆ ವಿಚಾರವಾಗಿ ಸರ್ಕಾರ ಹೊಂದಿರುವ ಗುರಿಯನ್ನು ತಲುಪಲು ಈ ಹಣಕಾಸಿನ ನೆರವು ಮುಖ್ಯ ಪಾತ್ರ ವಹಿಸಲಿದೆ ಎಂದು ಮೂಲಗಳು ವಿವರಿಸಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.