ADVERTISEMENT

ಕೆನರಾ, ಕರೂರ್‌ ವೈಶ್ಯ ಬ್ಯಾಂಕ್‌ಗಳಿಂದ ಸಾಲದ ಬಡ್ಡಿದರ ಹೆಚ್ಚಳ

ಪಿಟಿಐ
Published 6 ಜೂನ್ 2022, 14:24 IST
Last Updated 6 ಜೂನ್ 2022, 14:24 IST

ನವದೆಹಲಿ: ಕೆನರಾ ಬ್ಯಾಂಕ್‌ ಮತ್ತು ಕರೂರ್‌ ವೈಶ್ಯ ಬ್ಯಾಂಕ್‌ಗಳು ಸಾಲದ ಮೇಲಿನ ಬಡ್ಡಿ ದರವನ್ನು ಹೆಚ್ಚಿಸಿವೆ.

ಸರ್ಕಾರಿ ಸ್ವಾಮ್ಯದ ಕೆನರಾ ಬ್ಯಾಂಕ್‌ ಎಂಸಿಎಲ್‌ಆರ್‌ ಅನ್ನು ಶೇಕಡ 0.05ರಷ್ಟು ಹೆಚ್ಚಿಸಿದೆ. ಇದರಿಂದ ಒಂದು ವರ್ಷದ ಅವಧಿಯ ಸಾಲದ ಬಡ್ಡಿಯು ಶೇ 7.40ಕ್ಕೆ ತಲುಪಿದೆ.

ಆರು ತಿಂಗಳ ಅವಧಿಯ ಎಂಸಿಎಲ್‌ಆರ್‌ ದರ ಶೇ 7.30ರಿಂದ ಶೇ 7.35ಕ್ಕೆ ಏರಿಕೆ ಆಗಿದೆ. ಹೊಸ ದರಗಳು ಮಂಗಳವಾರದಿಂದ ಜಾರಿಗೆ ಬರಲಿವೆ ಎಂದು ಷೇರುಪೇಟೆಗೆ ಮಾಹಿತಿ ನೀಡಿದೆ.

ADVERTISEMENT

ಖಾಸಗಿ ವಲಯದ ಕರೂರ್‌ ವೈಶ್ಯ ಬ್ಯಾಂಕ್‌ ಬೆಂಚ್‌ಮಾರ್ಕ್‌ ಪ್ರೈಮ್‌ ಲೆಂಡಿಂಗ್‌ ರೇಟ್ (ಬಿಪಿಎಲ್‌ಆರ್‌) ಅನ್ನು ಶೇ 0.40ರಷ್ಟು ಹೆಚ್ಚಿಸಿದ್ದು ಶೇ 13.75ಕ್ಕೆ ತಲುಪಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.