ADVERTISEMENT

ಮೂರನೇ ತ್ರೈಮಾಸಿಕದಲ್ಲಿ ಕೆನರಾ ಬ್ಯಾಂಕ್‌ ನಿವ್ವಳ ಲಾಭ ₹ 1,502 ಕೋಟಿ

ಪಿಟಿಐ
Published 27 ಜನವರಿ 2022, 14:35 IST
Last Updated 27 ಜನವರಿ 2022, 14:35 IST
ಕೆನರಾ ಬ್ಯಾಂಕ್‌ ವ್ಯವಸ್ಥಾಪಕ ನಿರ್ದೇಶಕ ಎಲ್‌.ವಿ. ಪ್ರಭಾಕರ್‌
ಕೆನರಾ ಬ್ಯಾಂಕ್‌ ವ್ಯವಸ್ಥಾಪಕ ನಿರ್ದೇಶಕ ಎಲ್‌.ವಿ. ಪ್ರಭಾಕರ್‌   

ನವದೆಹಲಿ: ಸರ್ಕಾರಿ ಸ್ವಾಮ್ಯದ ಕೆನರಾ ಬ್ಯಾಂಕ್‌ ಪ್ರಸಕ್ತ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದಲ್ಲಿ ₹ 1,502 ಕೋಟಿ ನಿವ್ವಳ ಲಾಭ ಗಳಿಸಿದೆ. ಹಿಂದಿನ ಹಣಕಾಸು ವರ್ಷದ ಇದೇ ಅವಧಿಯಲ್ಲಿ ಬ್ಯಾಂಕ್ ₹ 696 ಕೋಟಿ ನಿವ್ವಳ ಲಾಭ ಗಳಿಸಿತ್ತು. ಆ ಅವಧಿಗೆ ಹೋಲಿಸಿದರೆ ಈ ಬಾರಿ ಲಾಭವು ಎರಡು ಪಟ್ಟು ಹೆಚ್ಚಾಗಿದೆ.

ಭವಿಷ್ಯದಲ್ಲಿ ಎದುರಾಗಬಹುದಾದ ಆರ್ಥಿಕ ನಷ್ಟ ಭರಿಸಲು ತೆಗೆದಿರಿಸುವ ಮೊತ್ತವು ₹ 4,210 ಕೋಟಿಯಿಂದ ₹ 2,245 ಕೋಟಿಗೆ ಇಳಿಕೆ ಆಗಿದೆ. ಹೀಗಾಗಿಯೇ ನಿವ್ವಳ ಲಾಭದಲ್ಲಿ ಹೆಚ್ಚಳ ಆಗಿದೆ ಎಂದು ಬ್ಯಾಂಕ್‌ ಹೇಳಿದೆ.

ಬ್ಯಾಂಕ್‌ನ ವರಮಾನವು ₹ 21,365 ಕೋಟಿಯಿಂದ ₹ 21,312 ಕೋಟಿಗೆ ಅಲ್ಪ ಇಳಿಕೆ ಕಂಡಿದೆ ಎಂದು ಷೇರುಪೇಟೆಗೆ ಮಾಹಿತಿ ನೀಡಿದೆ.

ADVERTISEMENT

ಬ್ಯಾಂಕ್‌ನ ವಸೂಲಾಗದ ಸಾಲದ ಸರಾಸರಿ ಪ್ರಮಾಣವು (ಎನ್‌ಪಿಎ) ಶೇ 7.46ರಿಂದ ಶೇ 7.80ಕ್ಕೆ ಏರಿಕೆ ಆಗಿದೆ. ನಿವ್ವಳ ಎನ್‌ಪಿಎ ಶೇ 2.64ರಿಂದ ಶೇ 2.86ಕ್ಕೆ ಏರಿಕೆ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.