ADVERTISEMENT

ಎಕ್ಸೈಸ್ ಸುಂಕ | ಸಿಗರೇಟು ಮಾರಾಟ ಇಳಿಕೆ: ಕ್ರಿಸಿಲ್ ರೇಟಿಂಗ್ಸ್‌ ಸಂಸ್ಥೆ ಅಂದಾಜು

ಪಿಟಿಐ
Published 28 ಜನವರಿ 2026, 15:34 IST
Last Updated 28 ಜನವರಿ 2026, 15:34 IST
Woman hands holding cigarette outdoor.
Woman hands holding cigarette outdoor.   

ನವದೆಹಲಿ: ಮುಂಬರುವ ಹಣಕಾಸು ವರ್ಷದಲ್ಲಿ ದೇಶಿ ಸಿಗರೇಟ್ ಉದ್ಯಮವು ಶೇಕಡ 6ರಿಂದ ಶೇ 8ರಷ್ಟು ಮಾರಾಟ ಇಳಿಕೆಯನ್ನು ಕಾಣಲಿದೆ ಎಂದು ಕ್ರಿಸಿಲ್ ರೇಟಿಂಗ್ಸ್‌ ಸಂಸ್ಥೆ ಅಂದಾಜು ಮಾಡಿದೆ.

ಸಿಗರೇಟಿಗೆ ಅನ್ವಯವಾಗುವ ಜಿಎಸ್‌ಟಿ ಏರಿಕೆ, ಹೆಚ್ಚುವರಿ ಎಕ್ಸೈಸ್‌ ಸುಂಕದ ಕಾರಣದಿಂದಾಗಿ ಹೀಗಾಗಲಿದೆ ಎಂದು ಕ್ರಿಸಿಲ್ ಹೇಳಿದೆ. ಹೆಚ್ಚುವರಿ ತೆರಿಗೆಯು ಫೆಬ್ರುವರಿ 1ರಿಂದ ಜಾರಿಗೆ ಬರಲಿದೆ.

ಈಗ ಸಿಗರೇಟಿನ ಮೇಲೆ ಶೇ 28ರಷ್ಟು ಜಿಎಸ್‌ಟಿ ಹಾಗೂ ಪರಿಹಾರ ಸೆಸ್‌ ವಿಧಿಸಲಾಗುತ್ತಿದೆ. ಆದರೆ ಫೆಬ್ರುವರಿ 1ರಿಂದ ಪರಿಹಾರ ಸೆಸ್‌ ಇಲ್ಲವಾಗುತ್ತದೆ, ಹೆಚ್ಚುವರಿ ಎಕ್ಸೈಸ್‌ ಸುಂಕ (ಸಿಗರೇಟಿನ ಉದ್ದ ಆಧರಿಸಿ ₹2.05ರಿಂದ ₹8.5ರವರೆಗೆ ಇರಲಿದೆ) ಜಾರಿಗೆ ಬರಲಿದೆ.

ADVERTISEMENT

65 ಮಿ.ಮೀ.ಗಿಂತ ಹೆಚ್ಚಿನ ಉದ್ದದ ಸಿಗರೇಟುಗಳಿಗೆ ₹3.06ರಿಂದ ₹8.5ರವರೆಗೆ ಎಕ್ಸೈಸ್‌ ಸುಂಕ ಜಾರಿಯಾಗಲಿದೆ. 65 ಮಿ.ಮೀ.ಗಿಂತ ಕಡಿಮೆ ಉದ್ದದ ಸಿಗರೇಟುಗಳಿಗೆ ₹2.05ರಿಂದ ₹2.1ರವರೆಗೆ ಎಕ್ಸೈಸ್ ಸುಂಕ ಅನ್ವಯವಾಗಲಿದೆ ಎಂದು ಕ್ರಿಸಿಲ್ ಹೇಳಿದೆ. ಇಷ್ಟೇ ಅಲ್ಲ. ಸಿಗರೇಟಿನ ಅಂತಿಮ ಬೆಲೆಯ ಮೇಲೆ ಅನ್ವಯವಾಗುವ ಜಿಎಸ್‌ಟಿ ದರವು ಶೇ 40ಕ್ಕೆ ಹೆಚ್ಚಳವಾಗಲಿದೆ.

ಸಿಗರೇಟು ತಯಾರಿಕಾ ಕಂಪನಿಗಳು ಬೆಲೆ ಏರಿಕೆಯ ಅಷ್ಟೂ ಪಾಲನ್ನು ಗ್ರಾಹಕರಿಗೆ ವರ್ಗಾಯಿಸಲಿಕ್ಕಿಲ್ಲ. ಹೀಗಾಗಿ ಕಂಪನಿಗಳ ವರಮಾನದ (ಬಡ್ಡಿ ಮತ್ತು ತೆರಿಗೆಪೂರ್ವ) ಪ್ರಮಾಣದಲ್ಲಿ ಶೇ 2ರಿಂದ ಶೇ 3ರಷ್ಟು ಇಳಿಕೆ ಆಗಬಹುದು ಎಂದು ಕ್ರಿಸಿಲ್ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.