ADVERTISEMENT

ಮೂಲಸೌಕರ್ಯ: ಪ್ರಮುಖ ವಲಯಗಳಲ್ಲಿ ಶೇ 7.4ರಷ್ಟು ಬೆಳವಣಿಗೆ

ಪಿಟಿಐ
Published 1 ಫೆಬ್ರುವರಿ 2023, 4:01 IST
Last Updated 1 ಫೆಬ್ರುವರಿ 2023, 4:01 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಮೂಲಸೌಕರ್ಯಕ್ಕೆ ಸಂಬಂಧಿಸಿದ ಎಂಟು ವಲಯಗಳ ಬೆಳವಣಿಗೆಯು ಡಿಸೆಂಬರ್‌ನಲ್ಲಿ ಶೇಕಡ 7.4ಕ್ಕೆ ತಲುಪಿದೆ. ಇದು ಮೂರು ತಿಂಗಳ ಗರಿಷ್ಠ ಮಟ್ಟ. ಹಿಂದಿನ ವರ್ಷದ ಇದೇ ಅವಧಿಯಲ್ಲಿ ಈ ಎಂಟು ವಲಯಗಳಲ್ಲಿ ಬೆಳವಣಿಗೆಯು ಶೇ 4.1ರಷ್ಟು ಇತ್ತು.

2022ರ ಡಿಸೆಂಬರ್‌ನಲ್ಲಿ ಕಲ್ಲಿದ್ದಲು, ರಸಗೊಬ್ಬರ, ಉಕ್ಕು ಮತ್ತು ವಿದ್ಯುತ್ ಉತ್ಪಾದನೆ ವಲಯಗಳಲ್ಲಿ ಉತ್ತಮ ಚಟುವಟಿಕೆ ದಾಖಲಾಗಿದ್ದು ಈ ಬೆಳವಣಿಗೆಗೆ ಪೂರಕವಾಗಿದೆ ಎಂದು ಅಧಿಕೃತ ಅಂಕಿ–ಅಂಶಗಳು ಹೇಳಿವೆ.

ಕಚ್ಚಾ ತೈಲ ಉತ್ಪಾದನೆಯು ಡಿಸೆಂಬರ್‌ ತಿಂಗಳಲ್ಲಿ ಶೇ 1.2ರಷ್ಟು ಕುಸಿತ ಕಂಡಿದೆ. 2022ರ ನವೆಂಬರ್‌ನಲ್ಲಿ ಎಂಟು ವಲಯಗಳಲ್ಲಿ ಉತ್ಪಾದನೆಯ ಪ್ರಮಾಣವು ಶೇ 5.7ರಷ್ಟು ಬೆಳವಣಿಗೆ ಕಂಡಿತ್ತು.

ADVERTISEMENT

ಪ್ರಸಕ್ತ ಹಣಕಾಸು ವರ್ಷದ ಏಪ್ರಿಲ್‌ನಿಂದ ಡಿಸೆಂಬರ್‌ವರೆಗಿನ ಅವಧಿಯಲ್ಲಿ ಎಂಟು ಮೂಲಸೌಕರ್ಯ ವಲಯಗಳ (ಕಲ್ಲಿದ್ದಲು, ಕಚ್ಚಾ ತೈಲ, ನೈಸರ್ಗಿಕ ಅನಿಲ, ಸಂಸ್ಕರಣಾ ಉತ್ಪನ್ನಗಳು, ರಸಗೊಬ್ಬರಗಳು, ಉಕ್ಕು, ಸಿಮೆಂಟ್ ಮತ್ತು ವಿದ್ಯುತ್) ಬೆಳವಣಿಗೆ ಪ್ರಮಾಣವು ಶೇ 8ರಷ್ಟು ಆಗಿದೆ. ಈ ವಲಯಗಳ ಬೆಳವಣಿಗೆ ಪ್ರಮಾಣವು ಹಿಂದಿನ ವರ್ಷದ ಏಪ್ರಿಲ್‌–ಡಿಸೆಂಬರ್‌ ಅವಧಿಯಲ್ಲಿ ಶೇ 12.6ರಷ್ಟು ಇತ್ತು.

2022ರ ಡಿಸೆಂಬರ್‌ನಲ್ಲಿ ಕಲ್ಲಿದ್ದಲು ಉತ್ಪಾದನೆಯು ಶೇ 11.5ರಷ್ಟು, ರಸಗೊಬ್ಬರ ಉತ್ಪಾದನೆಯು ಶೇ 7.3ರಷ್ಟು, ಉಕ್ಕು ಉತ್ಪಾದನೆಯು ಶೇ 9.2ರಷ್ಟು ಹಾಗೂ ವಿದ್ಯುತ್ ಉತ್ಪಾದನೆಯು ಶೇ 10ರಷ್ಟು ಹೆಚ್ಚಳ ಕಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.