ADVERTISEMENT

ಸಾಲ; ಬಹುತೇಕರ ಒಲವು

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2019, 18:32 IST
Last Updated 16 ಆಗಸ್ಟ್ 2019, 18:32 IST
   

ನವದೆಹಲಿ (ಪಿಟಿಐ): ಕೌಟುಂಬಿಕ ವೆಚ್ಚಗಳನ್ನು ಸರಿದೂಗಿಸಲು, ಜೀವನಮಟ್ಟ ಮೇಲ್ದರ್ಜೆಗೆ ಏರಿಸಲು ಸಾಲ ಮಾಡುವು
ದಾಗಿ ದೇಶದ ಪ್ರಮುಖ ನಗರಗಳ ಬಹುತೇಕ ನಿವಾಸಿಗಳು ತಿಳಿಸಿದ್ದಾರೆ.

ಅನೇಕ ಕಾರಣಗಳಿಗೆ ವಿವಿಧ ಬಗೆಯ ಸಾಲ ಪಡೆಯುವುದು ಅನಿವಾರ್ಯವಾಗಿರುತ್ತದೆ ಎಂದು ಅಧ್ಯಯನದಲ್ಲಿ ಭಾಗವಹಿಸಿದ್ದ 2,571 ಜನರಲ್ಲಿ ಶೇ 67ರಷ್ಟು ಜನರು ಅಭಿಪ್ರಾಯಪಟ್ಟಿದ್ದಾರೆ. ಹೋಮ್ ಕ್ರೆಡಿಟ್ ಇಂಡಿಯಾ, ಬೆಂಗಳೂರು ಸೇರಿದಂತೆ 12 ನಗರಗಳಲ್ಲಿ ಈ ಅಧ್ಯಯನ ಕೈಗೊಂಡಿತ್ತು.

ಕೌಟುಂಬಿಕ ಬೇಡಿಕೆಗಳಾದ ಗೃಹೋಪಯೋಗಿ ಸಲಕರಣೆ, ವಾಹನ, ಚಿನ್ನ ಖರೀದಿಗೆ ಸಾಲ ಮಾಡುವುದಾಗಿ ಅನೇಕರು ತಿಳಿಸಿದ್ದಾರೆ. ಮರುಪಾವತಿ ಸಾಧ್ಯವಾಗದೆ ಇರುವ ಕಾರಣಕ್ಕೆ ಸಾಲದ ಸಹವಾಸವೇ ಬೇಡ ಎಂದು ಹೇಳುವವರ ಸಂಖ್ಯೆ ಶೇ 32ರಷ್ಟಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.