ADVERTISEMENT

ಬೆಳೆಯಲಿದೆ ಸಾಲ ಮಾರುಕಟ್ಟೆ

​ಪ್ರಜಾವಾಣಿ ವಾರ್ತೆ
Published 27 ಜೂನ್ 2021, 16:03 IST
Last Updated 27 ಜೂನ್ 2021, 16:03 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಭಾರತದ ಗ್ರಾಹಕ ಸಾಲ ಮಾರುಕಟ್ಟೆಯು ವಿಶ್ವದ ಇತರ ಪ್ರಮುಖ ಅರ್ಥ ವ್ಯವಸ್ಥೆಗಳಲ್ಲಿನ ಬೆಳವಣಿಗೆಗಿಂತ ಹೆಚ್ಚಿನ ವೇಗದ ಬೆಳವಣಿಗೆ ದಾಖಲಿಸುವ ಅಂದಾಜು ಇದೆ ಎಂದು ‘ಎಕ್ಸ್‌ಪೀರಿಯನ್–ಇನ್ವೆಸ್ಟ್ ಇಂಡಿಯಾ’ ವರದಿ ಹೇಳಿದೆ.

ಬ್ಯಾಂಕೇತರ ಹಣಕಾಸು ಸಂಸ್ಥೆಗಳು (ಎನ್‌ಬಿಎಫ್‌ಸಿ) ಹಾಗೂ ಹಣಕಾಸು ತಂತ್ರಜ್ಞಾನ ಕ್ಷೇತ್ರದ ಕಂಪನಿಗಳು ಸಾಲದ ಮಾರುಕಟ್ಟೆಯಲ್ಲಿ ತಂದಿರುವ ಬದಲಾವಣೆ ಬಗೆಯನ್ನೂ ಈ ವರದಿಯು ವಿವರಿಸಿದೆ. ಇದುವರೆಗೆ ಬ್ಯಾಂಕಿಂಗ್ ಸೇವೆಗಳು ಸರಿಯಾಗಿ ಲಭ್ಯವಿಲ್ಲದಿದ್ದವರಿಗೆ ಈ ಸಂಸ್ಥೆಗಳು, ಕಂಪನಿಗಳು ಸೇವೆ ಒದಗಿಸಿವೆ ಎಂದು ಹೇಳಿದೆ. ವೈಯಕ್ತಿಕ ಸಾಲಗಳ ಮರುಪಾವತಿ ಪ್ರಮಾಣ ಹೆಚ್ಚಿನ ಮಟ್ಟದಲ್ಲಿಯೇ ಇದೆ ಎಂದೂ ವರದಿಯು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT