ADVERTISEMENT

ಸೈಕಲ್ ಪ್ಯೂರ್: ‘ಮೈ ಇನ್‍ಸೆನ್ಸ್' ಉತ್ಪನ್ನ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 19 ಜನವರಿ 2020, 19:45 IST
Last Updated 19 ಜನವರಿ 2020, 19:45 IST

ಬೆಂಗಳೂರು: ಅಗರಬತ್ತಿ ತಯಾರಿಸುವ ಸೈಕಲ್ ಪ್ಯೂರ್ ಅಗರಬತ್ತೀಸ್, ಹೊಸದಾಗಿ ‘ಮೈಇನ್‍ಸೆನ್ಸ್' ಉತ್ಪನ್ನ ಪರಿಚಯಿಸಿದೆ.

ಗ್ರಾಹಕರ ಅಭಿರುಚಿ ಆಧರಿಸಿ ತಯಾರಿಸಿದ ಈ ಹೊಸ ಉತ್ಪನ್ನವನ್ನು ಇಲ್ಲಿ ನಡೆದ ಸಮಾರಂಭದಲ್ಲಿ ನಟ ರಮೇಶ್ ಅರವಿಂದ್ ಮತ್ತು ಕಂ‍ಪನಿಯ ವ್ಯವಸ್ಥಾಪಕ ನಿರ್ದೇಶಕ ಅರ್ಜುನ್ ರಂಗಾ ಮಾರುಕಟ್ಟೆಗೆ ಬಿಡುಗಡೆ ಮಾಡಿದರು.

ಅಂತರ್ಜಾಲ ತಾಣ cycle.inನಲ್ಲಿ ಲಾಗಿನ್ ಆಗುವ ಮೂಲಕ, ಗ್ರಾಹಕರು ತಮಗೆ ಇಷ್ಟವಾದ ನಿರ್ದಿಷ್ಟ ಉತ್ಪನ್ನ ಖರೀದಿಸಬಹುದು. ಈ ಧೂಪದ್ರವ್ಯಗಳನ್ನು ಸುಗಂಧ, ದೈವತ್ವ, ಉತ್ಸವ ಮತ್ತು ಅನುಭವ ಆಧಾರಿತ ಎಂದು ನಾಲ್ಕು ವಿಧಗಳಲ್ಲಿ ವಿಂಗಡಿಸಲಾಗಿದೆ. ಇವುಗಳನ್ನು ಗಾತ್ರ, ಸುಗಂಧ ಮತ್ತು ಸುಗಂಧದ ತೀವ್ರತೆಯ ಆಧಾರದ ಮೇಲೆ ವರ್ಗೀಕರಿಸಲಾಗಿದೆ.

ADVERTISEMENT

‘ಮೈಇನ್‍ಸೆನ್ಸ್ ಮೂಲಕ ಪ್ರತಿಯೊಬ್ಬರ ವೈಯಕ್ತಿಕ ಆದ್ಯತೆಗಳನ್ನು ಪೂರೈಸಲು ಉದ್ದೇಶಿಸಲಾಗಿದೆ' ಎಂದು ಅರ್ಜುನ್ ರಂಗಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.