ADVERTISEMENT

ಗರಿಷ್ಠ ಮಟ್ಟಕ್ಕೆ ಪೆಟ್ರೋಲ್‌, ಡೀಸೆಲ್‌ ದರ

ಪಿಟಿಐ
Published 30 ಸೆಪ್ಟೆಂಬರ್ 2021, 16:48 IST
Last Updated 30 ಸೆಪ್ಟೆಂಬರ್ 2021, 16:48 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ಗುರುವಾರ ಇಂಧನ ದರ ಹೆಚ್ಚಿಸಿವೆ. ಇದರಿಂದಾಗಿ ದೇಶದಾದ್ಯಂತ ಪೆಟ್ರೋಲ್‌ ಮತ್ತು ಡೀಸೆಲ್‌ ದರಗಳು ದಾಖಲೆ ಮಟ್ಟಕ್ಕೆ ಏರಿಕೆ ಆಗಿವೆ.

ಗುರುವಾರ ಪೆಟ್ರೋಲ್‌ ದರ 25 ಪೈಸೆ ಮತ್ತು ಡೀಸೆಲ್‌ ದರ 30 ಪೈಸೆ ಹೆಚ್ಚಳ ಆಗಿದೆ. ಇದರಿಂದ ಬೆಂಗಳೂರಿನಲ್ಲಿ ಪೆಟ್ರೋಲ್‌ ದರ ₹105.15 ಮತ್ತು ಡೀಸೆಲ್‌ ದರ ₹ 95.34ಕ್ಕೆ ಏರಿಕೆ ಆಗಿದೆ.

ದೆಹಲಿಯಲ್ಲಿ ಪೆಟ್ರೋಲ್‌ ದರ ₹ 101.64 ಮತ್ತು ಡೀಸೆಲ್‌ ದರ ₹ 89.87ರಷ್ಟಾಗಿದೆ. ಮುಂಬೈನಲ್ಲಿ ಪೆಟ್ರೋಲ್‌ ದರ ₹ 107.71 ಮತ್ತು ಡೀಸೆಲ್ ದರ ₹ 97.52ಕ್ಕೆ ಏರಿಕೆ ಆಗಿದೆ.

ADVERTISEMENT

ಸೆಪ್ಟೆಂಬರ್‌ 24ರ ನಂತರ ಡೀಸೆಲ್‌ ದರ ಐದು ಬಾರಿ ಹೆಚ್ಚಳ ಆಗಿದೆ. ಇದರಿಂದ ಲೀಟರಿಗೆ ₹ 1.25 ರಷ್ಟು ಏರಿಕೆ ಆದಂತಾಗಿದೆ. ಪೆಟ್ರೋಲ್‌ ದರವು ಒಟ್ಟಾರೆ ಎರಡು ಬಾರಿಗೆ ಹೆಚ್ಚಳ ಆಗಿದ್ದು, ಲೀಟರಿಗೆ 50 ಪೈಸೆಗಳಷ್ಟು ಏರಿಕೆ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.