ADVERTISEMENT

ದೇಶಿ ಹೂಡಿಕೆದಾರರ ಪಾಲು ಹೆಚ್ಚಳ

ಎನ್‌ಎಸ್‌ಇ ಕಂಪನಿಗಳ ಮಾಹಿತಿ ಆಧರಿಸಿ ಮಾಹಿತಿ: ಪ್ರೈಮ್‌ ಡೇಟಾಬೇಸ್

ಪಿಟಿಐ
Published 12 ಫೆಬ್ರುವರಿ 2023, 16:25 IST
Last Updated 12 ಫೆಬ್ರುವರಿ 2023, 16:25 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಮುಂಬೈ: ರಾಷ್ಟ್ರೀಯ ಷೇರುಪೇಟೆಯಲ್ಲಿ ನೋಂದಾಯಿತ ಕಂಪನಿಗಳಲ್ಲಿ ದೇಶಿ ಸಾಂಸ್ಥಿಕ ಬಂಡವಾಳ ಹೂಡಿಕೆದಾರರ (ಡಿಐಐ) ಪಾಲು 2022ರ ಡಿಸೆಂಬರ್‌ ತ್ರೈಮಾಸಿಕದಲ್ಲಿ ಶೇ 24.44ಕ್ಕೆ ಏರಿಕೆ ಕಂಡಿದೆ. ಇದು ಸಾರ್ವಕಾಲಿಕ ಗರಿಷ್ಠ ಮಟ್ಟವಾಗಿದೆ ಎಂದು ಪ್ರೈಮ್‌ ಡೇಟಾಬೇಸ್‌ ಸಮೂಹ ತಿಳಿಸಿದೆ. ಸೆಪ್ಟೆಂಬರ್ ತ್ರೈಮಾಸಿಕ ದಲ್ಲಿ ದೇಶಿ ಹೂಡಿಕೆದಾರರ ಪಾಲು ಶೇ 22.37ರಷ್ಟು ಇತ್ತು.

ಡಿಸೆಂಬರ್‌ ತ್ರೈಮಾಸಿಕದ ಅಂತ್ಯಕ್ಕೆ ಎನ್‌ಎಸ್‌ಇನಲ್ಲಿ ಇರುವ 1,857 ಕಂಪನಿಗಳ ಪೈಕಿ 1,832 ಕಂಪನಿಗಳಲ್ಲಿನ ಷೇರುದಾರರ ಮಾಹಿತಿಯ ಆಧರಿಸಿ ಅದು ಈ ಮಾಹಿತಿ ನೀಡಿದೆ.

ಸತತ ಐದನೇ ತ್ರೈಮಾಸಿಕದಲ್ಲಿಯೂ ದೇಶಿ ಹೂಡಿಕೆದಾರರ ಪಾಲು ಹೆಚ್ಚಾಗಿದೆ. ಷೇರುಪೇಟೆಗಳಲ್ಲಿ ದೇಶಿ ಹೂಡಿಕೆದಾರರ ಪ್ರಬಾಲ್ಯ ಹೆಚ್ಚಾಗುತ್ತಿರುವುದನ್ನು ಇದು ಸೂಚಿಸುತ್ತಿದೆ ಎಂದು ಸಮೂಹದ ವ್ಯವಸ್ಥಾಪಕ ನಿರ್ದೇಶಕ ಪ್ರಣವ್‌ ಹಲ್ದಿಯಾ ತಿಳಿಸಿದ್ದಾರೆ.

ADVERTISEMENT

ಸಣ್ಣ ಹೂಡಿಕೆದಾರರ ಪಾಲು ಸೆಪ್ಟೆಂಬರ್‌ ತ್ರೈಮಾಸಿಕದಲ್ಲಿ ಶೇ 7.34ರಷ್ಟು ಇದ್ದಿದ್ದು ಡಿಸೆಂಬರ್ ತ್ರೈಮಾಸಿಕದಲ್ಲಿ ಶೇ 7.23ಕ್ಕೆ ಇಳಿಕೆ ಆಗಿದೆ. ಆದರೆ, ಮೌಲ್ಯದ ಲೆಕ್ಕದಲ್ಲಿ ₹19.48 ಲಕ್ಷ ಕೋಟಿಯಿಂದ ₹19.94 ಲಕ್ಷ ಕೋಟಿಗೆ ಏರಿಕೆ ಕಂಡಿದೆ. ಈ ಮೂಲಕ ಶೇ 2.35ರಷ್ಟು ಬೆಳವಣಿಗೆ ಕಂಡುಬಂದಿದೆ.

ದೇಶಿ ಸಾಂಸ್ಥಿಕ ಹೂಡಿಕೆದಾರರು ಡಿಸೆಂಬರ್‌ ತ್ರೈಮಾಸಿಕದಲ್ಲಿ ₹27,134 ಕೋಟಿ ಬಂಡವಾಳ ಹೂಡಿಕೆ ಮಾಡಿದ್ದಾರೆ. ಇದೇ ಅವಧಿಯಲ್ಲಿ ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ) ₹47,349 ಕೋಟಿ ಮೊತ್ತದ ಹೂಡಿಕೆ ಮಾಡಿದ್ದಾರೆ.

2015ರ ಮಾರ್ಚ್‌ ತ್ರೈಮಾಸಿಕದಲ್ಲಿ ಎಫ್‌ಐಐ ಮತ್ತು ಡಿಐಐ ನಡುವೆ ಷೇರು ಮಾಲೀಕತ್ವದ ಪ್ರಮಾಣದಲ್ಲಿ ಭಾರಿ ಅಂತರ ಇತ್ತು. ಡಿಐಐ ಮಾಲೀಕತ್ವವು ಎಫ್‌ಐಐಗಿಂತಲೂ ಶೇ 55.45ರಷ್ಟು ಕಡಿಮೆ ಇತ್ತು. 2009ರ ಜೂನ್‌ ನಂತರ, 13 ವರ್ಷಗಳ ಅವಧಿಯಲ್ಲಿ ಎಫ್‌ಐಐ ಷೇರುಪಾಲು ಶೇ 16.02 ರಿಂದ ಶೇ 20.18ಕ್ಕೆ ಏರಿಕೆ ಕಂಡಿದೆ. ಇದೇ ವೇಳೆ ಡಿಐಐ ಷೇರುಪಾಲು ಶೇ 11.38 ರಿಂದ ಶೇ 15.32ಕ್ಕೆ ಹೆಚ್ಚಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.