ADVERTISEMENT

ದೂರಸಂಪರ್ಕ: ಶೇ 100ರಷ್ಟು ಎಫ್‌ಡಿಐಗೆ ಅಧಿಸೂಚನೆ

ಪಿಟಿಐ
Published 6 ಅಕ್ಟೋಬರ್ 2021, 13:52 IST
Last Updated 6 ಅಕ್ಟೋಬರ್ 2021, 13:52 IST

ನವದೆಹಲಿ: ದೇಶದ ದೂರಸಂಪರ್ಕ ವಲಯದಲ್ಲಿ ಶೇಕಡ 100ರಷ್ಟು ವಿದೇಶಿ ಬಂಡವಾಳ ಹೂಡಿಕೆಗೆ ಅವಕಾಶ ಕಲ್ಪಿಸುವ ಅಧಿಸೂಚನೆಯನ್ನು ಕೇಂದ್ರ ಸರ್ಕಾರವು ಬುಧವಾರ ಪ್ರಕಟಿಸಿದೆ.

ಈ ನೀತಿಯ ಅನ್ವಯ, ವಿದೇಶಿ ಹೂಡಿಕೆದಾರರು ಸರ್ಕಾರದ ಪೂರ್ವಾನುಮತಿ ಇಲ್ಲದೆಯೇ ದೇಶದ ದೂರಸಂಪರ್ಕ ವಲಯದಲ್ಲಿ ಶೇಕಡ 100ರಷ್ಟು ಹೂಡಿಕೆ ಮಾಡಬಹುದು.

ಆದರೆ, ಭಾರತದ ಜೊತೆ ಗಡಿ ಹಂಚಿಕೊಂಡಿರುವ ದೇಶಗಳಲ್ಲಿನ ಕಂಪನಿಗಳು ಅಥವಾ ವ್ಯಕ್ತಿಗಳು ಹೂಡಿಕೆ ಮಾಡುವ ಮೊದಲು ಕೇಂದ್ರ ಸರ್ಕಾರದ ಅನುಮತಿ ಪಡೆಯಬೇಕಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.