ADVERTISEMENT

ಜಾಗತಿಕ ಆರ್ಥಿಕ ಬಿರುಗಾಳಿಏಳುವ ಸಾಧ್ಯತೆ: ಐಎಂಎಫ್‌

ಏಜೆನ್ಸೀಸ್
Published 10 ಫೆಬ್ರುವರಿ 2019, 17:15 IST
Last Updated 10 ಫೆಬ್ರುವರಿ 2019, 17:15 IST
ಲಗಾರ್ಡ್‌
ಲಗಾರ್ಡ್‌   

ದುಬೈ: ಸಂಭವನೀಯ ‘ಆರ್ಥಿಕ ಬಿರುಗಾಳಿ’ ಎದುರಿಸಲು ಸನ್ನದ್ಧ ಸ್ಥಿತಿಯಲ್ಲಿ ಇರಬೇಕು ಎಂದು ಅಂತರರಾಷ್ಟ್ರೀಯ ಹಣಕಾಸು ನಿಧಿಯು (ಐಎಂಎಫ್‌) ಸರ್ಕಾರಗಳಿಗೆ ಎಚ್ಚರಿಕೆ ನೀಡಿದೆ.

‘ಜಾಗತಿಕ ಆರ್ಥಿಕತೆ ಮೇಲೆ ನಾಲ್ಕು ಪ್ರಮುಖ ಕಾರ್ಮೋಡಗಳು ಕವಿದಿವೆ. ಇವೆಲ್ಲವು ಒಟ್ಟುಗೂಡಿದರೆ ಬಿರುಗಾಳಿ ಅಪ್ಪಳಿಸಬಹುದು. ವಾಣಿಜ್ಯ ಉದ್ವಿಗ್ನತೆ, ಆಮದು ಸುಂಕ ಸಮರ, ಹಣಕಾಸು ಪರಿಸ್ಥಿತಿ ಕಠಿಣಗೊಂಡಿರುವುದು ಮತ್ತು ಬ್ರೆಕ್ಸಿಟ್‌ ಫಲಶ್ರುತಿಗೆ ಸಂಬಂಧಿಸಿದ ಅನಿಶ್ಚಿತತೆಯು ಪ್ರತಿಕೂಲ ಪರಿಣಾಮ ಬೀರಲಿವೆ’ ಎಂದು ‘ಐಎಂಎಫ್‌’ನ ವ್ಯವಸ್ಥಾಪಕ ನಿರ್ದೇಶಕಿ ಕ್ರಿಸ್ಟಿನ್‌ ಲಗಾರ್ಡ್‌ ಅವರು ಆತಂಕ
ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT