ADVERTISEMENT

ಮಾರುಕಟ್ಟೆ ಮೌಲ್ಯ: ಮುಂಚೂಣಿಯಲ್ಲಿ ರಿಲಯನ್ಸ್‌

ಪಿಟಿಐ
Published 21 ಜೂನ್ 2020, 14:12 IST
Last Updated 21 ಜೂನ್ 2020, 14:12 IST
ಹೂಡಿಕೆ
ಹೂಡಿಕೆ   

ನವದೆಹಲಿ: ಮುಂಬೈ ಷೇರುಪೇಟೆಯಲ್ಲಿ ನೋಂದಾಯಿತ ಪ್ರಮುಖ 10 ಕಂಪನಿಗಳಲ್ಲಿ ಎಂಟು ಕಂಪನಿಗಳ ಮಾರುಕಟ್ಟೆ ಮೌಲ್ಯವು ಕಳೆದ ವಾರ ಒಟ್ಟಾರೆ ₹ 1.76 ಲಕ್ಷ ಕೋಟಿಗಳಷ್ಟು ಹೆಚ್ಚಾಗಿದೆ. ಈ ಮೊತ್ತದಲ್ಲಿ ರಿಲಯನ್ಸ್‌ ಇಂಡಸ್ಟ್ರೀಸ್‌ (ಆರ್‌ಐಎಲ್‌) ಅತಿ ಹೆಚ್ಚಿನ ಪಾಲು ಹೊಂದಿದೆ.

ವಾರದ ವಹಿವಾಟಿನಲ್ಲಿ ಆರ್‌ಐಎಲ್‌, ಸ್ಟಾರ್‌ ಪರ್ಫಾರ್ಮರ್‌ ಆಗಿ ಹೊರಹೊಮ್ಮಿದೆ. ಕಂಪನಿಯ ಮಾರುಕಟ್ಟೆ ಮೌಲ್ಯ ₹ 1.08 ಲಕ್ಷ ಕೋಟಿಗಳಷ್ಟ ಜಿಗಿತ ಕಂಡು ಒಟ್ಟಾರೆ ಮೌಲ್ಯವು ₹ 11.15 ಲಕ್ಷ ಕೋಟಿಗೆ ಏರಿಕೆಯಾಗಿದೆ. ಈ ಮೂಲಕ ಮಾರುಕಟ್ಟೆ ಮೌಲ್ಯದ ಲೆಕ್ಕದಲ್ಲಿ ದೇಶದ ಅತ್ಯಂತ ಮೌಲ್ಯಯುತ ಕಂಪನಿ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ.

ಕಂಪನಿಯು ತನ್ನೆಲ್ಲಾ ನಿವ್ವಳ ಸಾಲಗಳಿಂದ ಮುಕ್ತವಾಗಿದ್ದು, ಹೂಡಿಕೆದಾರರನ್ನು ಆಕರ್ಷಿಸಿದೆ. ಹೀಗಾಗಿ ಮೌಲ್ಯದಲ್ಲಿ ಏರಿಕೆ ಕಂಡಿದೆ. ಐಟಿಸಿ ಮತ್ತು ಎಚ್‌ಯುಎಲ್‌ ಮಾರುಕಟ್ಟೆ ಮೌಲ್ಯದಲ್ಲಿ ಇಳಿಕೆಯಾಗಿದೆ.

ADVERTISEMENT

ಮೌಲ್ಯದಲ್ಲಿ ಏರಿಕೆ

ರಿಲಯನ್ಸ್‌ ಇಂಡಸ್ಟ್ರೀಸ್‌; ₹ 1.08 ಲಕ್ಷ ಕೋಟಿ

ಎಚ್‌ಡಿಎಫ್‌ಸಿ ಬ್ಯಾಂಕ್; ₹ 27,788 ಕೋಟಿ

ಐಸಿಐಸಿಐ ಬ್ಯಾಂಕ್;₹ 12,729 ಕೋಟಿ

ಭಾರ್ತಿ ಏರ್‌ಟೆಲ್‌;₹ 6,301 ಕೋಟಿ

ಇನ್ಫೊಸಿಸ್‌;₹ 5,771 ಕೋಟಿ

ಕೋಟಕ್‌ ಮಹೀಂದ್ರಾ ಬ್ಯಾಂಕ್‌;₹ 4,442 ಕೋಟಿ

ಟಿಸಿಎಸ್‌;₹ 3,133 ಕೋಟಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.