ನವದೆಹಲಿ: ಕಾರ್ಮಿಕರ ರಾಜ್ಯ ವಿಮಾ ನಿಗಮದಡಿ (ಇಎಸ್‌ಐಸಿ) ಡಿಸೆಂಬರ್ ತಿಂಗಳಿನಲ್ಲಿ 17.01 ಲಕ್ಷ ಸದಸ್ಯರು ಹೊಸದಾಗಿ ನೋಂದಣಿಯಾಗಿದ್ದಾರೆ.
ಇಎಸ್‌ಐ ಯೋಜನೆಯಡಿ 20,360 ಕಂಪನಿಗಳು ನೋಂದಣಿಯಾಗಿವೆ. ಇದರಿಂದ ಸಾಮಾಜಿಕ ಭದ್ರತಾ ಯೋಜನೆಯಡಿ ಹೆಚ್ಚಿನ ಸಂಖ್ಯೆಯ ಕಾರ್ಮಿಕರು ಸೇರ್ಪಡೆಯಾಗಲು ನೆರವಾಗಿದೆ ಎಂದು ಕೇಂದ್ರ ಕಾರ್ಮಿಕ ಸಚಿವಾಲಯ ಶುಕ್ರವಾರ ತಿಳಿಸಿದೆ.
3.46 ಲಕ್ಷ ಮಹಿಳೆಯರು ಸದಸ್ಯತ್ವ ಪಡೆದಿದ್ದಾರೆ. ಹೊಸದಾಗಿ ನೋಂದಾಯಿತ ಒಟ್ಟು ಸದಸ್ಯರ ಪೈಕಿ 25 ವರ್ಷದ ಸದಸ್ಯರ ಸಂಖ್ಯೆ ಶೇ 48.35ರಷ್ಟಿದೆ ಎಂದು ವಿವರಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.