ಬೆಂಗಳೂರು: ಎಕ್ಸೈಡ್ ಲೈಫ್ ಇನ್ಶುರೆನ್ಸ್, ಮಾರ್ಚ್‌ಗೆ ಕೊನೆಗೊಂಡಿದ್ದ 2019–20ನೇ ಹಣಕಾಸು ವರ್ಷದಲ್ಲಿ ₹ 29 ಕೋಟಿ ಮೊತ್ತದ ತೆರಿಗೆ ಮುಂಚಿನ ಲಾಭ (ಪಿಬಿಟಿ) ಗಳಿಸಿದೆ.
‘2018–19ರ ಹಣಕಾಸು ವರ್ಷದಲ್ಲಿನ ₹ 12 ಕೋಟಿ ಮೊತ್ತದ ‘ಪಿಬಿಟಿ’ಗೆ ಹೋಲಿಸಿದರೆ ಕಳೆದ ವರ್ಷದ ‘ಪಿಬಿಟಿ’ಯು ಶೇ 141ರಷ್ಟು ಏರಿಕೆ ದಾಖಲಿಸಿದೆ. ಸತತ ಎಂಟನೇ ವರ್ಷವೂ ಕಂಪನಿ ಲಾಭದಲ್ಲಿದೆ’ ಎಂದು ಕಂಪನಿಯ ಸಿಇಒ ಕ್ಷಿತಿಜ್ ಜೈನ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.