ನವದೆಹಲಿ: ಮಾರ್ಚ್‌ನಲ್ಲಿ ರಫ್ತಿಗಿಂತಲೂ ಆಮದು ಪ್ರಮಾಣ ಹೆಚ್ಚಿದ್ದು, ₹1.84 ಲಕ್ಷ ಕೋಟಿ ವ್ಯಾಪಾರ ಕೊರತೆಯಾಗಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಮಂಗಳವಾರ ತಿಳಿಸಿದೆ.
ಮಾರ್ಚ್‌ನಲ್ಲಿ ಒಟ್ಟು ರಫ್ತು ಮೌಲ್ಯ ₹3.59 ಲಕ್ಷ ಕೋಟಿ ಆಗಿದೆ. ಆಮದು ಮೌಲ್ಯ ₹5.44 ಲಕ್ಷ ಕೋಟಿಯಾಗಿದೆ. ಇದು ನಾಲ್ಕು ತಿಂಗಳ ಗರಿಷ್ಠ ಮಟ್ಟವಾಗಿದೆ.
ರಫ್ತು ಮೌಲ್ಯಕ್ಕಿಂತ ಆಮದು ಮೌಲ್ಯ ಹೆಚ್ಚಿದ್ದರೆ ಈ ಅಂತರವನ್ನು ವ್ಯಾಪಾರ ಕೊರತೆ ಎಂದು ಕರೆಯಲಾಗುತ್ತದೆ.
2024–25ನೇ ಆರ್ಥಿಕ ವರ್ಷದಲ್ಲಿ ಒಟ್ಟು ರಫ್ತು ಮೌಲ್ಯ ₹37.51 ಲಕ್ಷ ಕೋಟಿಯಾಗಿದ್ದರೆ, ಆಮದು ಮೌಲ್ಯ ₹61.76 ಲಕ್ಷ ಕೋಟಿಯಾಗಿದೆ. ಒಟ್ಟು ವ್ಯಾಪಾರ ಕೊರತೆಯು ₹24.25 ಲಕ್ಷ ಕೋಟಿ ಆಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.