ADVERTISEMENT

ಹೆಚ್ಚಿದ ವ್ಯಾಪಾರ ಕೊರತೆ ಅಂತರ

ಪಿಟಿಐ
Published 15 ಜೂನ್ 2022, 15:59 IST
Last Updated 15 ಜೂನ್ 2022, 15:59 IST

ನವದೆಹಲಿ: ಮೇ ತಿಂಗಳಿನಲ್ಲಿ ದೇಶದ ರಫ್ತು ಪ್ರಮಾಣವು ಶೇಕಡ 20.55ರಷ್ಟು ಹೆಚ್ಚಳ ಕಂಡಿದ್ದು, ₹ 3.04 ಲಕ್ಷ ಕೋಟಿಗೆ ತಲುಪಿದೆ. ವ್ಯಾಪಾರ ಕೊರತೆ ಅಂತರವು ದಾಖಲೆಯ ₹ 1.89 ಲಕ್ಷ ಕೋಟಿ ಆಗಿದೆ.

ಮೇ ತಿಂಗಳಿನಲ್ಲಿ ಆಮದು ಪ್ರಮಾಣವು ಶೇ 62.83ರಷ್ಟು ಹೆಚ್ಚಳ ಕಂಡು, ₹ 4.93 ಲಕ್ಷ ಕೋಟಿಗೆ ಏರಿಕೆ ಆಗಿದೆ ಎಂದು ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಅಂಕಿ–ಅಂಶಗಳು ಹೇಳಿವೆ. ಹಿಂದಿನ ವರ್ಷದ ಮೇ ತಿಂಗಳಿನಲ್ಲಿ ವ್ಯಾಪಾರ ಕೊರತೆ ಅಂತರವು ₹ 51 ಸಾವಿರ ಕೋಟಿ ಆಗಿತ್ತು.

ಎಣ್ಣೆ ಹೊರತಾಗಿನ ವಸ್ತುಗಳ ರಫ್ತಿನಲ್ಲಿ ಆಗಿರುವ ಅಲ್ಪ ಇಳಿಕೆ ಹಾಗೂ ಚಿನ್ನದ ಆಮದಿನಲ್ಲಿ ಆಗಿರುವ ಭಾರಿ ಏರಿಕೆಯ ಕಾರಣದಿಂದಾಗಿ ದೇಶದ ವ್ಯಾಪಾರ ಕೊರತೆ ಅಂತರವು ಮೇ ತಿಂಗಳಲ್ಲಿ ದಾಖಲೆಯ ಮಟ್ಟಕ್ಕೆ ತಲುಪಿದೆ ಎಂದು ಐಸಿಆರ್‌ಎ ಸಂಸ್ಥೆಯ ಅರ್ಥಶಾಸ್ತ್ರಜ್ಞೆ ಅದಿತಿ ನಾಯರ್ ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.