ADVERTISEMENT

ಫ್ಯಾಬ್ ಇಂಡಿಯಾ ಐಪಿಒಗೆ ಒಪ್ಪಿಗೆ

ಪಿಟಿಐ
Published 2 ಮೇ 2022, 15:49 IST
Last Updated 2 ಮೇ 2022, 15:49 IST
   

ನವದೆಹಲಿ: ಫ್ಯಾಬ್ ಇಂಡಿಯಾ, ಏಥರ್ ಇಂಡಸ್ಟ್ರೀಸ್ ಸೇರಿದಂತೆ ಒಟ್ಟು ಏಳು ಕಂಪನಿಗಳಿಗೆ ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ) ಮೂಲಕ ಬಂಡವಾಳ ಸಂಗ್ರಹಿಸಲು ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯು (ಸೆಬಿ) ಅನುಮತಿ ನೀಡಿದೆ.

ಸಿರ್ಮಾ ಎಸ್‌ಜಿಎಸ್ ಟೆಕ್ನಾಲಜಿ, ಏಷ್ಯಾನೆಟ್ ಸ್ಯಾಟಲೈಟ್ ಕಮ್ಯುನಿಕೇಷನ್ಸ್, ಸನಾತನ್ ಟೆಕ್ಸ್‌ಟೈಲ್ಸ್, ಕ್ಯಾಪಿಲ್ಲರಿ ಟೆಕ್ನಾಲಜೀಸ್ ಇಂಡಿಯಾ ಮತ್ತು ಹರ್ಷ ಎಂಜಿನಿಯರ್ಸ್ ಇಂಟರ್‌ನ್ಯಾಷನಲ್‌ ಐಪಿಒ ಮೂಲಕ ಬಂಡವಾಳ ಸಂಗ್ರಹಿಸಲು ಒಪ್ಪಿಗೆ ಪಡೆದಿರುವ ಇತರ ಕಂಪನಿಗಳು.

ಫ್ಯಾಬ್‌ ಇಂಡಿಯಾ ಕಂಪನಿ ಸಲ್ಲಿಸಿರುವ ಕರಡು ದಾಖಲೆಪತ್ರಗಳ ಅನ್ವಯ, ಒಟ್ಟು ಏಳು ಲಕ್ಷ ಷೇರುಗಳನ್ನು ರೈತರು ಹಾಗೂ ಕುಶಲಕರ್ಮಿಗಳಿಗೆ ಉಡುಗೊರೆಯಾಗಿ ನೀಡಲಾಗುತ್ತದೆ. ಕಂಪನಿಯ ಐಪಿಒ ಗಾತ್ರವು ಅಂದಾಜು ₹ 4 ಸಾವಿರ ಕೋಟಿ ಆಗಿರುತ್ತದೆ ಎಂದು ಮೂಲಗಳು ತಿಳಿಸಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.