ADVERTISEMENT

ವಿತ್ತೀಯ ಕೊರತೆ ಹೆಚ್ಚಳ

ಪಿಟಿಐ
Published 29 ಫೆಬ್ರುವರಿ 2020, 18:30 IST
Last Updated 29 ಫೆಬ್ರುವರಿ 2020, 18:30 IST

ನವದೆಹಲಿ: ವಿತ್ತೀಯ ಕೊರತೆಯು2019–20ರ ಜನವರಿ ಅಂತ್ಯಕ್ಕೆ ಬಜೆಟ್‌ ಅಂದಾಜನ್ನೂ ಮೀರಿ ಶೇ 128.5ಕ್ಕೆ ತಲುಪಿದೆ ಎಂದು ಸಿಜಿಎ ವರದಿ ತಿಳಿಸಿದೆ.

2018–19ನೇ ಹಣಕಾಸು ವರ್ಷದಲ್ಲಿ ವಿತ್ತೀಯ ಕೊರತೆ ಶೇ 121.5ರಷ್ಟಿತ್ತು.

ವೆಚ್ಚ ಮತ್ತು ವರಮಾನದ ನಡುವಣ ಅಂತರವಾದ ವಿತ್ತೀಯ ಕೊರತೆಯು ಮೌಲ್ಯದ ಲೆಕ್ಕದಲ್ಲಿ ಜನವರಿ ಅಂತ್ಯಕ್ಕೆ ₹ 9.85 ಲಕ್ಷ ಕೋಟಿಗಳಷ್ಟಾಗಿದೆ. ಆದರೆ, ಮಾರ್ಚ್ 31ರ ಅಂತ್ಯಕ್ಕೆ ₹ 7.66 ಲಕ್ಷ ಕೋಟಿಗೆ ನಿಯಂತ್ರಿಸುವ ಗುರಿಯನ್ನು ಸರ್ಕಾರ ಇಟ್ಟುಕೊಂಡಿದೆ. ಜಿಡಿಪಿಯಲ್ಲಿ ವಿತ್ತೀಯ ಕೊರತೆ ಶೇ 3.3ರಷ್ಟಾಗುವ ಅಂದಾಜು ಮಾಡಲಾಗಿತ್ತು. ಆದರೆ ವರಮಾನ ಸಂಗ್ರಹದಲ್ಲಿನ ಕೊರತೆಯಿಂದ ಬಜೆಟ್‌ನಲ್ಲಿ ಅದನ್ನು ಶೇ 3.8ಕ್ಕೆ ಏರಿಕೆ ಮಾಡಲಾಯಿತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.