ADVERTISEMENT

ಫ್ಲಿಪ್‌ಕಾರ್ಟ್: ಕನ್ನಡದಲ್ಲಿಯೂ ವ್ಯವಹಾರ

​ಪ್ರಜಾವಾಣಿ ವಾರ್ತೆ
Published 24 ಜೂನ್ 2020, 16:37 IST
Last Updated 24 ಜೂನ್ 2020, 16:37 IST
ಫ್ಲಿಪ್ ಕಾರ್ಟ್
ಫ್ಲಿಪ್ ಕಾರ್ಟ್   

ಬೆಂಗಳೂರು: ಇ-ಕಾಮರ್ಸ್‌ನ ಫ್ಲಿಪ್‌ಕಾರ್ಟ್ ಅಂತರ್ಜಾಲ ತಾಣದಲ್ಲಿ ಈಗ ಕನ್ನಡ ಭಾಷೆ ಬಳಕೆಗೆ ತರಲಾಗಿದೆ.

ಪ್ರಾದೇಶಿಕ ಭಾಷೆಯ ಗ್ರಾಹಕರಿಗೆ ಇ–ಕಾಮರ್ಸ್‌ ವಹಿವಾಟು ನಡೆಸಲು ಇದ್ದ ಅಡೆತಡೆ ಈಗ ನಿವಾರಣೆಯಾಗಿದೆ. ತೆಲುಗು ಮತ್ತು ತಮಿಳು ಭಾಷೆಗಳನ್ನೂ ಬಳಕೆಗೆ ತರಲಾಗಿದೆ.

ದಕ್ಷಿಣದ ರಾಜ್ಯಗಳು ಫ್ಲಿಪ್‌ಕಾರ್ಟ್‌ನ ಪ್ರಮುಖ ಮಾರುಕಟ್ಟೆಯಾಗಿವೆ. ಪ್ರಾದೇಶಿಕ ಭಾಷೆಯ ಅಳವಡಿಕೆಯಿಂದ ಹೆಚ್ಚೆಚ್ಚು ಗ್ರಾಹಕರನ್ನು ಸೆಳೆಯಲು ಸಾಧ್ಯವಾಗಲಿದೆ ಎಂದು ಕಂಪನಿ ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.