ADVERTISEMENT

ಫ್ಲಿಪ್‌ಕಾರ್ಟ್‌ನಲ್ಲಿ ಸರಕು ಪ್ಯಾಕಿಂಗ್‌ಗೆ ರೋಬೊ ಬಳಕೆ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2019, 18:03 IST
Last Updated 24 ಮಾರ್ಚ್ 2019, 18:03 IST
   

ಬೆಂಗಳೂರು: ಪ್ರಮುಖ ಇ–ಕಾಮರ್ಸ್‌ ಕಂಪನಿ ಫ್ಲಿಪ್‌ಕಾರ್ಟ್‌ ಬೆಂಗಳೂರಿನಲ್ಲಿರುವ ತನ್ನ ಗೋದಾಮಿನಲ್ಲಿ ಸರಕುಗಳ ಪ್ಯಾಕಿಂಗ್‌ ಸೇರಿದಂತೆ ಇನ್ನಿತರ ಕಾರ್ಯಗಳಿಗೆ ರೋಬೊ ಬಳಕೆಯನ್ನು ಆರಂಭಿಸಿದೆ.

ವಿಂಗಡಣಾ ಕೇಂದ್ರ ‘ಸೌಕ್ಯ’ದಲ್ಲಿ 100 ಕ್ಕೂ ಹೆಚ್ಚು ಸ್ವಯಂಚಾಲಿತ ರೋಬೊಗಳುಪ್ರತಿ ಪ್ಯಾಕೇಜ್‍ನಲ್ಲಿ ನೀಡಿರುವ ಎನ್‍ಕೋಡೆಡ್ ಮಾಹಿತಿಗಳನ್ನು ಗುರುತಿಸಿ, ಗ್ರಾಹಕರ ಪಿನ್‌ಕೋಡ್‌ ಆಧಾರದಲ್ಲಿ ವಿಂಗಡಿಸುತ್ತವೆ. ಇದರಿಂದ ಗ್ರಾಹಕರಿಗೆ ತ್ವರಿತವಾಗಿ ಸರಕುಗಳನ್ನು ಪೂರೈಸಲು ಅನುಕೂಲವಾಗಲಿದೆ.

ಲಭ್ಯ ಇರುವ ಮಾನವ ಸಂಪನ್ಮೂಲದ ಕೆಲಸದ ಕೌಶಲ್ಯ ಹೆಚ್ಚಿಸಲು ಮತ್ತು ಕಡಿಮೆ ವೆಚ್ಚದಲ್ಲಿ ಈ ಎಲ್ಲಾ ಕೆಲಸಗಳು ನಿರ್ವಹಿಸಲು ರೋಬೊಗಳ ಬಳಕೆ ಸಹಕಾರಿಯಾಗಿದೆ ಎಂದು ಕಂಪನಿ ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.