ADVERTISEMENT

ವಿದೇಶಿ ವಿನಿಮಯ ಸಂಗ್ರಹ ಇಳಿಕೆ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2019, 17:32 IST
Last Updated 16 ಫೆಬ್ರುವರಿ 2019, 17:32 IST
   

ಮುಂಬೈ (ಪಿಟಿಐ): ಕೆಲವು ವಾರಗಳಿಂದ ಏರುಮುವಾಗಿದ್ದದೇಶದ ವಿದೇಶಿ ವಿನಿಮಯ ಮೀಸಲು ಸಂಗ್ರಹ ಫೆಬ್ರುವರಿ 8ಕ್ಕೆ ಕೊನೆಗೊಂಡ ವಾರದಲ್ಲಿ ಇಳಿಕೆ ಕಂಡಿದೆ ಎಂದು ಆರ್‌ಬಿಐ ಮಾಹಿತಿ ನೀಡಿದೆ.

ವಿದೇಶಿ ಕರೆನ್ಸಿಗಳ ಸಂಗ್ರಹದಲ್ಲಿ ಇಳಿಕೆ ಆಗಿರುವುದರಿಂದ ವಿದೇಶಿ ವಿನಿಮಯ ಮೀಸಲು ಸಂಗ್ರಹ ₹ 14,981 ಕೋಟಿಯಷ್ಟು ಕಡಿಮೆ
ಯಾಗಿ ₹ 28.25 ಲಕ್ಷ ಕೋಟಿಗೆ ಇಳಿಕೆಯಾಗಿದೆ. ಇದಕ್ಕೂ ಹಿಂದಿನ ವಾರದಲ್ಲಿ ₹ 28.40 ಲಕ್ಷ ಕೋಟಿ
ಯಷ್ಟಿತ್ತು.

2018ರ ಏಪ್ರಿಲ್‌ 13 ರಂದು ಮೀಸಲು ಸಂಗ್ರಹ ₹ 30.24 ಲಕ್ಷ ಕೋಟಿಗೆ ದಾಖಲೆ ಮಟ್ವವನ್ನು ತಲುಪಿತ್ತು. ಆ ಬಳಿಕ ಇಳಿಮುಖವಾಗಿದ್ದು, ಇದುವರೆಗೆ ₹ 2.20 ಲಕ್ಷ ಕೋಟಿಗಳಷ್ಟು ಇಳಿಕೆಯಾಗಿದೆ.

ADVERTISEMENT

ಐಎಂಎಫ್‌ನಲ್ಲಿನ ಭಾರತದ ಕರೆನ್ಸಿ ಸಂಗ್ರಹ ₹ 2,392 ಕೋಟಿ ಹೆಚ್ಚಾಗಿ ₹ 21,229 ಕೋಟಿಗೆ ತಲುಪಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.