ಮುಂಬೈ: ದೇಶದ ವಿದೇಶಿ ವಿನಿಮಯ ಮೀಸಲು ಸಂಗ್ರಹ ಡಿಸೆಂಬರ್ 21ಕ್ಕೆ ಕೊನೆಗೊಂಡ ವಾರದಲ್ಲಿ ₹1169 ಕೋಟಿ ಹೆಚ್ಚಾಗಿ, ₹27.53 ಲಕ್ಷ ಕೋಟಿಗೆ ಏರಿಕೆಯಾಗಿದೆ.
ವಿದೇಶಿ ಕರೆನ್ಸಿಗಳ ಸಂಗ್ರಹದಲ್ಲಿನ ಹೆಚ್ಚಳದಿಂದ ಮೀಸಲು ಸಂಗ್ರಹದಲ್ಲಿ ಏರಿಕೆ ಕಂಡುಬಂದಿದೆ ಎಂದುಆರ್ಬಿಐ ಮಾಹಿತಿ ನೀಡಿದೆ.
ಇದಕ್ಕೂ ಹಿಂದಿನ ವಾರದಲ್ಲಿ ₹ 27.51 ಲಕ್ಷ ಕೋಟಿ ಇತ್ತು.
ಚಿನ್ನದ ಮೀಸಲು ಸಂಗ್ರಹ₹ 259 ಕೋಟಿ ಹೆಚ್ಚಾಗಿ ₹ 1.48 ಲಕ್ಷ ಕೋಟಿಗೆ ತಲುಪಿದೆ.
ಅಂತರರಾಷ್ಟ್ರೀಯ ಹಣಕಾಸು ನಿಧಿಯಲ್ಲಿನ (ಐಎಂಎಫ್) ಭಾರತದ ಕರೆನ್ಸಿ ಸಂಗ್ರಹ 111 ಕೋಟಿ ಹೆಚ್ಚಾಗಿ ₹ 18,410 ಕೋಟಿಗೆ ಏರಿಕೆಯಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.