ADVERTISEMENT

ಎಚ್‌ಎಎಲ್‌ಗೆ ₹30,400 ಕೋಟಿ ವರಮಾನ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2025, 14:37 IST
Last Updated 1 ಏಪ್ರಿಲ್ 2025, 14:37 IST
ಎಚ್‌ಎಎಲ್‌
ಎಚ್‌ಎಎಲ್‌   

ಬೆಂಗಳೂರು: ಹಿಂದುಸ್ತಾನ್ ಏರೋನಾಟಿಕ್ಸ್‌ ಲಿಮಿಟೆಡ್‌ (ಎಚ್‌ಎಎಲ್‌) 2024–25ರ ಮಾರ್ಚ್‌ 31ಕ್ಕೆ ಕೊನೆಗೊಂಡ ಆರ್ಥಿಕ ವರ್ಷದಲ್ಲಿ ₹30,400 ಕೋಟಿ (ತಾತ್ಕಾಲಿಕ ಮತ್ತು ಲೆಕ್ಕಪರಿಶೋಧನೆ ಮಾಡದ) ವರಮಾನ ಗಳಿಸಿದೆ.

2023–24ರ ಆರ್ಥಿಕ ವರ್ಷದ ಇದೇ ಅವಧಿಯಲ್ಲಿ ₹30,381 ಕೋಟಿ ವರಮಾನ ಗಳಿಸಿತ್ತು ಎಂದು ಎಚ್‌ಎಎಲ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಡಿ.ಕೆ. ಸುನಿಲ್ ತಿಳಿಸಿದ್ದಾರೆ.

ಎಚ್‌ಎಎಲ್‌ನ ಕಾರ್ಯಾದೇಶದ ಮೊತ್ತವು ₹1.84 ಲಕ್ಷ ಕೋಟಿಗಳಾಗಿದೆ. 2024-25ರ ಆರ್ಥಿಕ ವರ್ಷದಲ್ಲಿ, ₹1.02 ಲಕ್ಷ ಕೋಟಿ ಮೌಲ್ಯದ ಹೊಸ ತಯಾರಿಕಾ ಒಪ್ಪಂದ, ₹17,500 ಕೋಟಿ ಮೌಲ್ಯದ ದುರಸ್ತಿ ಮತ್ತು ಕೂಲಂಕುಷ ಪರೀಕ್ಷೆ ಒಪ್ಪಂದಗಳನ್ನು ಪಡೆದುಕೊಂಡಿದೆ. 

ADVERTISEMENT

ಇತ್ತೀಚೆಗೆ, ಕಂಪನಿಯು ರಕ್ಷಣಾ ಸಚಿವಾಲಯದೊಂದಿಗೆ 156 ಲಘು ಯುದ್ಧ ಹೆಲಿಕಾಪ್ಟರ್‌ಗಳು ಪ್ರಚಂದ್ ಪೂರೈಕೆ ಒಪ್ಪಂದಕ್ಕೆ ಸಹಿ ಹಾಕಿದೆ. ಇದರ ಮೌಲ್ಯ ₹62,777 ಕೋಟಿಯಾಗಿದೆ ಎಂದು ತಿಳಿಸಿದ್ದಾರೆ.

2025–26ರ ಆರ್ಥಿಕ ವರ್ಷದಲ್ಲೂ ಕಂಪನಿ ಉತ್ತಮ ಹಣಕಾಸಿನ ಸಾಧನೆ ಮಾಡುವ ವಿಶ್ವಾಸವಿದೆ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.