ADVERTISEMENT

ಭಾರತದತ್ತ ಜಾಗತಿಕ ಹೂಡಿಕೆದಾರರ ಚಿತ್ತ: ಪ್ರಧಾನಿ ಮೋದಿ

ಪಿಟಿಐ
Published 30 ಜುಲೈ 2024, 14:19 IST
Last Updated 30 ಜುಲೈ 2024, 14:19 IST
<div class="paragraphs"><p>ನರೇಂದ್ರ ಮೋದಿ</p></div>

ನರೇಂದ್ರ ಮೋದಿ

   

ಪಿಟಿಐ ಚಿತ್ರ

ನವದೆಹಲಿ: ‘ಭಾರತವು ಬಂಡವಾಳ ಹೂಡಿಕೆಯ ತಾಣವಾಗಿದೆ. ಹಾಗಾಗಿ, ವಿಶ್ವದಾದ್ಯಂತ ಹೂಡಿಕೆದಾರರು ದೇಶದತ್ತ ನೋಟ ನೆಟ್ಟಿದ್ದಾರೆ. ವಿಕಸಿತ ಭಾರತದ ಗುರಿ ಸಾಧನೆಯ ದೃಷ್ಟಿಯಿಂದ ದೇಶೀಯ ಕೈಗಾರಿಕಾ ವಲಯವು ಈ ಸುವರ್ಣಾವಕಾಶವನ್ನು ಸದ್ಬಳಕೆ ಮಾಡಿಕೊಳ್ಳಬೇಕಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಸಲಹೆ ನೀಡಿದ್ದಾರೆ.

ADVERTISEMENT

ಭಾರತೀಯ ಕೈಗಾರಿಕಾ ಒಕ್ಕೂಟದಿಂದ ಮಂಗಳವಾರ ‘ವಿಕಸಿತ ಭಾರತದತ್ತ ಪಯಣ’ ಶೀರ್ಷಿಕೆಯಡಿ ಕೇಂದ್ರ ಬಜೆಟ್‌ ಕುರಿತು ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಸದ್ಯ ಭಾರತವು ಜಾಗತಿಕ ಮಟ್ಟದಲ್ಲಿ ಐದನೇ ಅತಿದೊಡ್ಡ ಆರ್ಥಿಕತೆಯಾಗಿದೆ. ಮುಂದಿನ ಐದು ವರ್ಷಗಳಲ್ಲಿ ಮೂರನೇ ಸ್ಥಾನಕ್ಕೇರುವ ಹಾದಿಯಲ್ಲಿದೆ’ ಎಂದರು. 

ಜಾಗತಿಕ ಅಭಿವೃದ್ಧಿಗೆ ಕೇಂದ್ರ ಸರ್ಕಾರದ ನೀತಿಗಳು, ಬದ್ಧತೆ ಹಾಗೂ ಹೂಡಿಕೆಯು ತಳಹದಿಯಾಗಲಿದೆ. ಹಾಗಾಗಿ, ಜಾಗತಿಕ ಹೂಡಿಕೆದಾರರು ಭಾರತದತ್ತ ಬರುತ್ತಿದ್ದಾರೆ. ನಮ್ಮ ದೇಶದ ಮೇಲೆ ಅವರಿಗೆ ಧನಾತ್ಮಕ ಒಲವಿದೆ. ಇಂತಹ ಅವಕಾಶವನ್ನು ನಾವು ಕಳೆದುಕೊಳ್ಳಬಾರದು ಎಂದು ಹೇಳಿದರು.

ಜಾಗತಿಕ ಬಿಕ್ಕಟ್ಟಿನಿಂದಾಗಿ ವಿಶ್ವದ ಹಲವು ದೇಶಗಳಲ್ಲಿ ಹಣದುಬ್ಬರ ಏರಿಕೆಯಾಗುತ್ತಿದೆ. ಇದರಿಂದ ಆರ್ಥಿಕತೆ ಬೆಳವಣಿಗೆ ಕುಂಠಿತವಾಗುತ್ತಿದೆ. ಇದರ ನಡುವೆಯೇ ಭಾರತದ ಆರ್ಥಿಕತೆಯು ಏರುಗತಿಯಲ್ಲಿದೆ ಎಂದು ತಿಳಿಸಿದರು.

ದೇಶದಲ್ಲಿ 1.40 ಲಕ್ಷ ನವೋದ್ಯಮಗಳಿವೆ. ಲಕ್ಷಾಂತರ ಯುವಜನರಿಗೆ ಕೆಲಸ ನೀಡಿವೆ. ಮುದ್ರಾ ಯೋಜನೆ, ಸ್ಟಾರ್ಟ್‌ಅಪ್‌ ಇಂಡಿಯಾ ಹಾಗೂ ಸ್ಟಾರ್ಟ್‌ಅಪ್‌ ಇಂಡಿಯಾ ಯೋಜನೆಯಡಿ 8 ಕೋಟಿಗೂ ಹೆಚ್ಚು ಜನರು ಹೊಸದಾಗಿ ವ್ಯಾಪಾರ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.