ADVERTISEMENT

ಇಸ್ರೇಲ್–ಇರಾನ್ ಸಂಘರ್ಷ ಶಮನ: ಚಿನ್ನದ ಬೆಲೆ ಪ್ರತಿ 10 ಗ್ರಾಂ ಗೆ ₹930 ಇಳಿಕೆ

ಪಿಟಿಐ
Published 27 ಜೂನ್ 2025, 13:46 IST
Last Updated 27 ಜೂನ್ 2025, 13:46 IST
   

ನವದೆಹಲಿ: ಪಶ್ಚಿಮ ಏಷ್ಯಾದ ಇಸ್ರೇಲ್ ಮತ್ತು ಇರಾನ್ ನಡುವಿನ ಉದ್ವಿಗ್ನತೆ ಕಡಿಮೆಯಾಗಿರುವುದು ಮತ್ತು ಅಮೆರಿಕ ಹಾಗೂ ಚೀನಾ ನಡುವಿನ ವ್ಯಾಪಾರ ಒಪ್ಪಂದದ ಬಗ್ಗೆ ಅನುಕೂಲಕರ ವರದಿಗಳ ಹಿನ್ನೆಲೆಯಲ್ಲಿ ಶುಕ್ರವಾರ ರಾಷ್ಟ್ರ ರಾಜಧಾನಿಯಲ್ಲಿ ಚಿನ್ನದ ಬೆಲೆ 10 ಗ್ರಾಂಗೆ ₹930 ಇಳಿಕೆಯಾಗಿ ₹97,670ಗೆ ತಲುಪಿದೆ.

ಅಖಿಲ ಭಾರತ ಸರಫಾ ಅಸೋಸಿಯೇಷನ್ ​​ಪ್ರಕಾರ, ಶೇ 99.9ರಷ್ಟು ಶುದ್ಧ ಚಿನ್ನದ ಬೆಲೆ ಗುರುವಾರ 10 ಗ್ರಾಂಗೆ 98,600ಗೆ ಮುಕ್ತಾಯಗೊಂಡಿತ್ತು. ಶುಕ್ರವಾರ, ಶೇ 99.5ರಷ್ಟು ಶುದ್ಧ ಚಿನ್ನದ ಬೆಲೆಯು 10 ಗ್ರಾಂಗೆ ₹850ಗಳಷ್ಟು ಇಳಿಕೆಯಾಗಿ ₹97,200ಗೆ (ಎಲ್ಲ ತೆರಿಗೆಗಳನ್ನು ಒಳಗೊಂಡಂತೆ) ತಲುಪಿದೆ.

ಪ್ರಮುಖ ತೈಲ ಮೂಲಸೌಕರ್ಯ ಮತ್ತು ಸಾರಿಗೆ ಮಾರ್ಗಗಳನ್ನು ಮುಚ್ಚುವ ನಿರ್ಧಾರದಿಂದ ಇರಾನ್ ಹಿಂದೆ ಸರಿದ ನಂತರ, ವಿಶೇಷವಾಗಿ, ಜಾಗತಿಕ ತೈಲ ಸಾಗಣೆಗೆ ಅತ್ಯಂತ ನಿರ್ಣಾಯಕ ಹೊರ್ಮುಜ್ ಜಲಸಂಧಿ ಮುಚ್ಚದಿರಲು ನಿರ್ಧರಿಸಿದ ಬಳಿಕ ಕಚ್ಚಾ ತೈಲ ಬೆಲೆಗಳು ಕುಸಿದಿವೆ ಎಂದು ಅಬಾನ್ಸ್ ಫೈನಾನ್ಷಿಯಲ್ ಸರ್ವೀಸಸ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಚಿಂತನ್ ಮೆಹ್ತಾ ಹೇಳಿದ್ದಾರೆ.

ADVERTISEMENT

ಈ ಇಳಿಕೆ ಮಾರುಕಟ್ಟೆಗಳಲ್ಲಿ ತಕ್ಷಣದ ಅಪಾಯಗಳನ್ನು ಕಡಿಮೆ ಮಾಡಿದ್ದು, ಚಿನ್ನದ ಮೇಲೆ ಮತ್ತಷ್ಟು ಒತ್ತಡ ಹೇರಿದೆ ಎಂದು ಮೆಹ್ತಾ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.