ADVERTISEMENT

ಬೇಳೆಕಾಳುಗಳ ಸಂಗ್ರಹ ಮಿತಿಗೆ ನಿರ್ಬಂಧ

ಪಿಟಿಐ
Published 2 ಜುಲೈ 2021, 20:41 IST
Last Updated 2 ಜುಲೈ 2021, 20:41 IST

ನವದೆಹಲಿ: ಬೆಲೆ ಏರಿಕೆ ತಡೆಯುವ ನಿಟ್ಟಿನಲ್ಲಿ ಹೆಸರುಕಾಳು ಹೊರತುಪಡಿಸಿ ಉಳಿದ ಎಲ್ಲ ಬೇಳೆಕಾಳುಗಳ ಮೇಲಿನ ಸಂಗ್ರಹ ಮಿತಿಯನ್ನು ಶುಕ್ರವಾರ ವಿಧಿಸಿದೆ.

ಸಗಟುದಾರರು, ಚಿಲ್ಲರೆ ವ್ಯಾಪಾರಿಗಳಿಗೆ ಮತ್ತು ಆಮದುದಾರರಿಗೆ ಈ ಆದೇಶ ಅನ್ವಯವಾಗಲಿದೆ ಎಂದು ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವಾಲಯ ತಿಳಿಸಿದೆ.

ಸಗಟುದಾರರಿಗೆ 200 ಟನ್‌ಗಳ ಸಂಗ್ರಹ ಮಿತಿ ಹಾಗೂ ಚಿಲ್ಲರೆ ವ್ಯಾಪಾರಿಗಳಿಗೆ 5 ಟನ್‌ ಸಂಗ್ರಹದ ಮಿತಿಯನ್ನು ವಿಧಿಸಲಾಗಿದೆ ಎಂದು ತಿಳಿಸಿದೆ. ಸಂಗ್ರಹ ಮಿತಿ ಮೀರಿದರೆ ಗ್ರಾಹಕರ ವ್ಯವಹಾರಗಳ ಆನ್‌ಲೈನ್‌ ಪೋರ್ಟಲ್‌ನಲ್ಲಿ ವಿವರ ನೀಡಬೇಕು ಎಂದು ಸೂಚಿಸಿದೆ. ಜತೆಗೆ, 30 ದಿನಗಳ ಒಳಗೆ ನಿಗದಿಪಡಿಸಿದ ಮಿತಿ ಉಳಿಸಿಕೊಳ್ಳಬೇಕು ಎಂದು ನಿರ್ದೇಶನ ನೀಡಿದೆ. ಮಾರ್ಚ್‌, ಏಪ್ರಿಲ್‌ ತಿಂಗಳಲ್ಲಿ ಬೇಳೆ ಕಾಳುಗಳ ಬೆಲೆ ಹೆಚ್ಚುತ್ತಿರುವುದರಿಂದ ಸಚಿವಾಲಯ ಈ ಕ್ರಮಕೈಗೊಂಡಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.