ನವದೆಹಲಿ: ಪ್ರಾಣಿ ಉತ್ಪನ್ನಗಳ ರಫ್ತಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ದೇಶದ ಎಂಟು ರಾಜ್ಯಗಳಲ್ಲಿ ಕಾಲುಬಾಯಿ ರೋಗ ಮುಕ್ತ ವಲಯಗಳ ಘೋಷಣೆಗೆ ಕೇಂದ್ರ ಸರ್ಕಾರ ತೀರ್ಮಾನಿಸಿದೆ.
ಆಹಾರ ಮತ್ತು ಕೃಷಿ ಸಂಘಟನೆಯಿಂದ (ಎಫ್‌ಎಒ) ಪ್ರಾಣಿಗಳ ಸಾಂಕ್ರಾಮಿಕ ರೋಗ ತಡೆಗಟ್ಟುವ ಸಂಬಂಧ ಇತ್ತೀಚೆಗೆ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು.
‘ರಾಷ್ಟ್ರೀಯ ರೋಗ ನಿಯಂತ್ರಣ ಕಾರ್ಯಕ್ರಮದಡಿ ಪ್ರಾಣಿಗಳಿಗೆ ಕಾಡುವ ಕಾಲುಬಾಯಿ, ಪೆಸ್ಟೆ ಡೆಸ್ ಪೆಟಿಟ್ಸ್ ರೂಮಿನಂಟ್ಸ್ (ಪಿಪಿಆರ್), ಕಂದು ಹಾಕುವ ರೋಗ (ಬ್ರುಸೆಲ್ಲೋಸಿಸ್) ಹಾಗೂ ಹಂದಿ ಜ್ವರದ ಹತೋಟಿಗೆ ಕ್ರಮವಹಿಸಲಾಗಿದೆ’ ಎಂದು ಕೇಂದ್ರ ಪಶುಪಾಲನಾ ಮತ್ತು ಹೈನುಗಾರಿಕೆ ಇಲಾಖೆಯ ಕಾರ್ಯದರ್ಶಿ ಅಲ್ಕಾ ಉಪಾಧ್ಯಾಯ ತಿಳಿಸಿದ್ದಾರೆ.
ಕಾಲುಬಾಯಿ ಮುಕ್ತ ವಲಯಗಳ ಘೋಷಣೆಗೆ ಸಂಬಂಧಿಸಿದಂತೆ ಪ್ರಾಣಿಗಳಿಗೆ ಲಸಿಕೆ ಹಾಕುವ ಕಾರ್ಯ ಪ್ರಗತಿಯಲ್ಲಿದೆ. ಇದರಿಂದ ಜಾಗತಿಕ ಮಾರುಕಟ್ಟೆಯಲ್ಲಿ ಭಾರತದ ಪ್ರಾಣಿ ಉತ್ಪನ್ನಗಳ ಮಾರಾಟಕ್ಕೆ ಅನುಕೂಲವಾಗಲಿದೆ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.