ADVERTISEMENT

ತಿರುಗಣೆ ಆಮದಿಗೆ ಕೇಂದ್ರ ನಿರ್ಬಂಧ

ಪಿಟಿಐ
Published 26 ಮೇ 2025, 15:38 IST
Last Updated 26 ಮೇ 2025, 15:38 IST
   

ನವದೆಹಲಿ: ಚೀನಾದಂತಹ ದೇಶಗಳಿಂದ ಆಮದಾಗುವ ಕಡಿಮೆ ಗುಣಮಟ್ಟದ ಬಾಗಿಲಿನ ತಿರುಗಣೆ (ಹಿಂಜಸ್‌) ಆಮದನ್ನು ಕೇಂದ್ರ ಸರ್ಕಾರ ಸೋಮವಾರ ನಿರ್ಬಂಧಿಸಿದೆ. ಹಿಂಜಸ್‌ ಅನ್ನು ಬಾಗಿಲು ಮತ್ತು ಚೌಕಟ್ಟು ಜೋಡಿಸಲು ಬಳಸಲಾಗುತ್ತದೆ.

ಪ್ರತಿ ಕೆ.ಜಿಗೆ ₹280ಕ್ಕಿಂತ ಕಡಿಮೆ ದರದ, ವಿಮೆ, ಸರಕು ಸಾಗಣೆ (ಸಿಐಎಫ್‌) ಮೌಲ್ಯವನ್ನು ಹೊಂದಿರುವ ಈ ವಸ್ತುಗಳ ಆಮದು ನಿರ್ಬಂಧಿಸಲಾಗಿದೆ ಎಂದು ವಿದೇಶಿ ವ್ಯಾಪಾರ ಮಹಾನಿರ್ದೇಶನಾಲಯ (ಡಿಜಿಎಫ್‌ಟಿ) ಅಧಿಸೂಚನೆಯಲ್ಲಿ ತಿಳಿಸಿದೆ.

ಈಗ, ಈ ಸರಕಿನ ದರವು (ವೆಚ್ಚ, ವಿಮೆ ಮತ್ತು ಸಾಗಾಟ ಸೇರಿ) ಪ್ರತಿ ಕೆ.ಜಿಗೆ ₹280ಕ್ಕಿಂತ ಕಡಿಮೆಯಿದ್ದರೆ ಆಮದುದಾರರು ಡಿಜಿಎಫ್‌ಟಿಯಿಂದ ಅನುಮತಿ ಅಥವಾ ಪರವಾನಗಿಯನ್ನು ಪಡೆಯಬೇಕಾಗುತ್ತದೆ. ಚೀನಾ, ಇಟಲಿ ಮತ್ತು ಜರ್ಮನಿಯಂತಹ ದೇಶಗಳಿಂದ ಪ್ರಸ್ತುತ ಈ ಸರಕುಗಳು ಆಮದಾಗುತ್ತಿವೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.