ADVERTISEMENT

ಪ್ರಧಾನ ಮಂತ್ರಿ ಫಸಲು ವಿಮಾ ಯೋಜನೆ; ರೈತರ ಮನೆ ಬಾಗಿಲಿಗೆ ಬೆಳೆ ವಿಮೆ ಪಾಲಿಸಿ

ಪಿಟಿಐ
Published 18 ಫೆಬ್ರುವರಿ 2022, 19:31 IST
Last Updated 18 ಫೆಬ್ರುವರಿ 2022, 19:31 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಪ್ರಧಾನ ಮಂತ್ರಿ ಫಸಲು ವಿಮಾ ಯೋಜನೆಯು (ಪಿಎಂಎಫ್‌ಬಿವೈ) ಏಳನೆಯ ವರ್ಷಕ್ಕೆ ಕಾಲಿಡುತ್ತಿದ್ದು, ಮುಂಬರುವ ಮುಂಗಾರು ಅವಧಿಯಲ್ಲಿ ವಿಮಾ ಪಾಲಿಸಿಗಳನ್ನು ರೈತರ ಮನೆಬಾಗಿಲಿಗೆ ತಲುಪಿಸುವ ಅಭಿಯಾನವನ್ನು ಕೇಂದ್ರ ಸರ್ಕಾರ ಆರಂಭಿಸಲಿದೆ.

ಪಾಲಿಸಿಯ ವಿವರ, ಜಮೀನಿನ ದಾಖಲೆಗಳು, ಕ್ಲೇಮ್‌ ಪ್ರಕ್ರಿಯೆ ಮತ್ತು ದೂರು ಹೇಳಿಕೊಳ್ಳುವ ಬಗ್ಗೆ ಎಲ್ಲ ರೈತರಿಗೂ ಗೊತ್ತಿರಬೇಕು ಎಂಬ ಉದ್ದೇಶವು ‘ಮೇರಿ ಪಾಲಿಸಿ ಮೇರಿ ಹಾಥ್’ ಹೆಸರಿನ ಈ ಅಭಿಯಾನಕ್ಕೆ ಇದೆ ಎಂದು ಕೇಂದ್ರ ಕೃಷಿ ಸಚಿವಾಲಯ ಹೇಳಿದೆ.

ಯೋಜನೆಯು ಜಾರಿಯಲ್ಲಿ ಇರುವ ಎಲ್ಲ ರಾಜ್ಯಗಳಲ್ಲಿಯೂ ಈ ಅಭಿಯಾನ ಆರಂಭವಾಗಲಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.