ADVERTISEMENT

ಜಿಎಸ್‌ಟಿ ವಿಳಂಬ ಶುಲ್ಕ ಎರಡು ತಿಂಗಳ ಅವಧಿಗೆ ಮನ್ನಾ

ಪಿಟಿಐ
Published 26 ಮೇ 2022, 19:30 IST
Last Updated 26 ಮೇ 2022, 19:30 IST
   

ನವದೆಹಲಿ: 2021–22ನೇ ಸಾಲಿನಲ್ಲಿ ಜಿಎಸ್‌ಟಿ ವಿವರಗಳನ್ನು ತಡವಾಗಿ ಸಲ್ಲಿಸುವ ಸಣ್ಣ ತೆರಿಗೆದಾರರಿಗೆ ವಿಳಂಬ ಶುಲ್ಕವನ್ನು ಎರಡು ತಿಂಗಳ ಅವಧಿಗೆ ಮನ್ನಾ ಮಾಡಲಾಗಿದೆ.

ವಾರ್ಷಿಕ ಜಿಎಸ್‌ಟಿಆರ್‌–4 ಸಲ್ಲಿಸುವುದು ತಡವಾದಲ್ಲಿ ವಿಳಂಬ ಶುಲ್ಕವನ್ನು ಮೇ 1ರಿಂದ ಜೂನ್‌ 30ರವರೆಗಿನ ಅವಧಿಗೆ ಮನ್ನಾ ಮಾಡಲಾಗುತ್ತದೆ ಎಂದು ಕೇಂದ್ರ ಪರೋಕ್ಷ ತೆರಿಗೆಗಳ ಮಂಡಳಿಯು ಅಧಿಸೂಚನೆಯಲ್ಲಿ ಹೇಳಿದೆ.

ಜಿಎಸ್‌ಟಿಆರ್‌–4 ಸಲ್ಲಿಸುವುದು ತಡವಾದಲ್ಲಿ ಪ್ರತಿದಿನಕ್ಕೆ ₹ 50ರಂತೆ (ಗರಿಷ್ಠ ₹ 2,000) ವಿಳಂಬ ಶುಲ್ಕ ವಿಧಿಸಲಾಗುತ್ತದೆ. ಆದರೆ, ಪಾವತಿಸಬೇಕಿರುವ ಒಟ್ಟು ತೆರಿಗೆಯು ಶೂನ್ಯವಾಗಿದ್ದಲ್ಲಿ, ಗರಿಷ್ಠ ₹ 500ರಷ್ಟು ವಿಳಂಬ ಶುಲ್ಕ ವಿಧಿಸಲಾಗುತ್ತದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.