ADVERTISEMENT

ಜಿಎಸ್‌ಟಿ ಸಂಗ್ರಹದಲ್ಲಿ ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2020, 20:15 IST
Last Updated 1 ಫೆಬ್ರುವರಿ 2020, 20:15 IST
   

ನವದೆಹಲಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಸಂಗ್ರಹವು ಜನವರಿಯಲ್ಲಿ ₹ 1.1 ಲಕ್ಷ ಕೋಟಿಗೆ ತಲುಪಿದೆ.

2019ರ ಜನವರಿಯಲ್ಲಿ ₹ 1.02 ಲಕ್ಷ ಕೋಟಿ ತೆರಿಗೆ ಸಂಗ್ರಹವಾಗಿತ್ತು. 2019ರ ನವೆಂಬರ್‌ ಮತ್ತು ಡಿಸೆಂಬರ್‌ನಲ್ಲಿಯೂ ₹ 1 ಲಕ್ಷ ಕೋಟಿಗಿಂತಲೂ ಅಧಿಕ ತೆರಿಗೆ ಸಂಗ್ರಹವಾಗಿತ್ತು.

ತೆರಿಗೆ ವಂಚನೆ ತಡೆಯಲು ಹಲವು ಕ್ರಮಗಳನ್ನು ಕೈಗೊಂಡಿರುವುದರಿಂದಾಗಿತೆರಿಗೆ ಸಂಗ್ರಹದಲ್ಲಿ ಏರಿಕೆಯಾಗುತ್ತಿದೆ ಎಂದು ಸರ್ಕಾರ ತಿಳಿಸಿದೆ.

ADVERTISEMENT

ರೆವಿನ್ಯೂ ಕಾರ್ಯದರ್ಶಿ ಅಜಯ್‌ ಭೂಷಣ್ ಪಾಂಡೆ ನೇತೃತ್ವದ ಸಮಿತಿಯು ನಿಗದಿಪಡಿಸಿರುವ ಗುರಿಯ ಸಮೀಪದಲ್ಲಿದೆ. ಜನವರಿ ಮತ್ತು ಫೆಬ್ರುವರಿಯಲ್ಲಿ ಪ್ರತಿ ತಿಂಗಳು ₹ 1.15 ಲಕ್ಷ ಕೋಟಿ ಸಂಗ್ರಹಿಸುವ ಗುರಿ ನೀಡಲಾಗಿದೆ.

ಕೇಂದ್ರ ಜಿಎಸ್‌ಟಿ ಮೂಲಕ ₹ 20,944 ಕೋಟಿ, ರಾಜ್ಯ ಜಿಎಸ್‌ಟಿಯಿಂದ ₹ 28,224 ಕೋಟಿ ಹಾಗೂ ಸಮಗ್ರ ಜಿಎಸ್‌ಟಿಯಿಂದ
₹ 53,013 ಕೋಟಿ ಸಂಗ್ರಹವಾಗಿದೆ. ಸೆಸ್‌ನಿಂದ ₹ 8,637 ಕೋಟಿ ಬಂದಿದೆ ಎಂದು ಮಾಹಿತಿ ನೀಡಿದೆ.

ಡಿಸೆಂಬರ್‌ ತಿಂಗಳಿನ ಜಿಎಸ್‌ಟಿಆರ್‌ 3ಬಿ ಸಲ್ಲಿಕೆಯು 83 ಲಕ್ಷಕ್ಕೆ ತಲುಪಿದೆ.

ಏಪ್ರಿಲ್‌–ನವೆಂಬರ್‌ ಅವಧಿಯಲ್ಲಿನ ಜಿಎಸ್‌ಟಿ ಸಂಗ್ರಹ ₹ 3.28 ಲಕ್ಷ ಕೋಟಿಗಳಷ್ಟಾಗಿದ್ದು, ಬಜೆಟ್‌ ಅಂದಾಜಿಗಿಂತಲೂ ಶೇ 40ರಷ್ಟು ಕಡಿಮೆಯಾಗಿದೆ.

ನಕಲಿ ಇನ್‌ವಾಯ್ಸ್‌ ಪತ್ತೆ: ಖರೀದಿ ಮತ್ತು ಮಾರಾಟಕ್ಕೆ ಸಂಬಂಧಿಸಿದ ಇನ್‌ವಾಯ್ಸ್‌, ಜಿಎಸ್‌ಟಿಆರ್‌–1, ಜಿಎಸ್‌ಟಿಆರ್–2ಎ ಮತ್ತು ಜಿಎಸ್‌ಟಿಆರ್‌–3ಬಿಯಲ್ಲಿನ ದತ್ತಾಂಶಗಳು ಹೊಂದಾಣಿಕೆ ಆಗದೇ ಇರುವುದು, ರಿಟರ್ನ್ಸ್‌ ಸಲ್ಲಿಸದೇ ಇರುವುದು, ನಕಲಿ ಇನ್‌ವಾಯ್ಸ್‌ ಸಲ್ಲಿಸಿ ಮರುಪಾವತಿ ಪಡೆಯುವುದು ಒಳಗೊಂಡು ಇನ್ನೂ ಹಲವು ಅಂಶಗಳ ಬಗ್ಗೆ ತೆರಿಗೆ ಅಧಿಕಾರಿಗಳು ಸಮಗ್ರವಾಗಿ ಪರಿಶೀಲನೆ ನಡೆಸಿ ತೆರಿಗೆ ವಂಚನೆಯನ್ನು ಪತ್ತೆ ಮಾಡಲು ಆರಂಭಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.