ADVERTISEMENT

ಜಿಎಸ್‌ಟಿ: ವಿಳಂಬ ರಿಟರ್ನ್‌ ದಂಡಕ್ಕೆ ₹ 500 ಮಿತಿ

ಪಿಟಿಐ
Published 4 ಜುಲೈ 2020, 4:44 IST
Last Updated 4 ಜುಲೈ 2020, 4:44 IST
-
-   

ನವದೆಹಲಿ: ಮಾಸಿಕ ಮತ್ತು ತ್ರೈಮಾಸಿಕ ಮಾರಾಟ ರಿಟರ್ನ್‌ ಮತ್ತು ತೆರಿಗೆ ಪಾವತಿ ಅರ್ಜಿ ಜಿಎಸ್‌ಟಿಆರ್‌–3ಬಿ ವಿಳಂಬ ಸಲ್ಲಿಕೆಯ ಶುಲ್ಕವನ್ನು ಗರಿಷ್ಠ ₹ 500ಕ್ಕೆ ಮಿತಿಗೊಳಿಸಲಾಗಿದೆ.

ಪ್ರತಿ ರಿಟರ್ನ್‌ಗೆ ವಿಳಂಬ ಶುಲ್ಕದ ಮಿತಿ ನಿಗದಿಪಡಿಸಿರುವುದು ಜಿಎಸ್‌ಟಿ ತೆರಿಗೆದಾರರಿಗೆ ನೆಮ್ಮದಿ ನೀಡಲಿದೆ. ‌2017ರ ಜುಲೈನಿಂದ 2020ರ ಜುಲೈವರೆಗಿನ ಅವಧಿಯ ರಿಟರ್ನ್‌ಗಳಿಗೆ ಇದು ಅನ್ವಯವಾಗಲಿದೆ. ಇದೇ ಸೆಪ್ಟೆಂಬರ್‌ ಅಂತ್ಯದ ಒಳಗೆ ಸಲ್ಲಿಕೆಯಾಗುವ ‘ಜಿಎಸ್‌ಟಿಆರ್‌–3ಬಿ’ ರಿಟರ್ನ್‌ಗಳಿಗೆ ಇದು ಅನ್ವಯವಾಗಲಿದೆ. ತೆರಿಗೆ ಬಾಕಿ ಉಳಿಸಿಕೊಂಡಿರದಿದ್ದರೆ ವಿಳಂಬ ಶುಲ್ಕ ಇರುವುದಿಲ್ಲ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT