ADVERTISEMENT

ಜಿಎಸ್‌ಟಿಎನ್‌ ಸಹಾಯವಾಣಿ: 56 ಸಾವಿರ ತೆರಿಗೆದಾರರಿಗೆ ನೆರವು

ಪಿಟಿಐ
Published 3 ಮೇ 2020, 19:00 IST
Last Updated 3 ಮೇ 2020, 19:00 IST

ನವದೆಹಲಿ: ಲಾಕ್‌ಡೌನ್‌ ಜಾರಿಗೊಳಿಸಿದ ಒಂದು ತಿಂಗಳಿನಲ್ಲಿ 56 ಸಾವಿರ ತೆರಿಗೆ ಪಾವತಿದಾರರ ಸಮಸ್ಯೆಗಳಿಗೆ ಸ್ಪಂದಿಸಲಾಗಿದೆ ಎಂದು ಜಿಎಸ್‌ಟಿಎನ್‌ ಸಹಾಯವಾಣಿ ತಿಳಿಸಿದೆ.

ಲಾಕ್‌ಡೌನ್‌ ಸಂದರ್ಭದಲ್ಲಿ ಸಹಾಯವಾಣಿಗೆ ಬರುವ ಕರೆಗಳು ಮತ್ತು ಪ್ರಶ್ನೆಗಳ ಸಂಖ್ಯೆಯಲ್ಲಿ ಭಾರಿ ಇಳಿಕೆ ಕಂಡುಬಂದಿದೆ. ಇದಕ್ಕೂ ಮೊದಲು ಬರುತ್ತಿದ್ದ ಕರೆಗಳು ಮತ್ತು ಪ್ರಶ್ನೆಗಳಿಗೆ ಹೋಲಿಸಿದರೆ ಲಾಕ್‌ಡೌನ್‌ ಅವಧಿಯಲ್ಲಿನ ಪ್ರಮಾಣ ಕೇವಲ ಶೇ 20ರಷ್ಟಿದೆ ಎಂದು ತಿಳಿಸಿದೆ.

ಲಾಕ್‌ಡೌನ್‌ಗೂ ಮೊದಲು ಸಹಾಯವಾಣಿಗೆ ಪ್ರತಿದಿನವೂ ಸರಾಸರಿ 8 ಸಾವಿರದಿಂದ 10 ಸಾವಿರ ಕರೆಗಳು ಬರುತ್ತಿದ್ದವು ಎಂದು ಮಾಹಿತಿ ನೀಡಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.