ಬೆಂಗಳೂರು: ವಿಲಾಸಿ ಪ್ರಯಾಣಿಕ ಕಾರುಗಳ ತಯಾರಿಕಾ ಸಂಸ್ಥೆ ಹೋಂಡಾ ಕಾರ್ಸ್ ಇಂಡಿಯಾ, ದೇಶಿ ಮಾರುಕಟ್ಟೆಗೆ ಐಷಾರಾಮಿ 5ನೆ ಪೀಳಿಗೆಯ ಹೊಸ ‘ಹೋಂಡಾ ಸಿಆರ್-ವಿ’ ಸ್ಪೋರ್ಟ್ಸ್ ಯುಟಿಲಿಟಿ ವೆಹಿಕಲ್ (ಎಸ್ಯುವಿ) ಬಿಡುಗಡೆ ಮಾಡಿದೆ.
ಹೊಸ ಪೀಳಿಗೆಯ ಎಸ್ಯುವಿಗಳಿಗೆ ಮಾನದಂಡವಾಗಿ ‘ಸಿಆರ್-ವಿ’ ಅಭಿವೃದ್ಧಿಪಡಿಸಲಾಗಿದೆ. ಡೀಸೆಲ್ ಹಾಗೂ ಪೆಟ್ರೋಲ್ ಮಾದರಿಗಳಲ್ಲಿ ಲಭ್ಯ ಇರಲಿದೆ. ವಿಲಾಸಿ ಹಾಗೂ ಆರಾಮದಾಯಕ ಒಳಾಂಗಣವು ಇದರ ವಿಶೇಷತೆಗಳಾಗಿವೆ. ಪೆಟ್ರೋಲ್ ಚಾಲಿತ ಎಸ್ಯುವಿ ಎಕ್ಸ್ಷೋರೂಂ ಬೆಲೆ ₹ 28.15 ಲಕ್ಷದಿಂದ ಮತ್ತು ಡೀಸೆಲ್ ಚಾಲಿತದ ಬೆಲೆ ₹ 30.65 ಲಕ್ಷದಿಂದ ಆರಂಭಗೊಳ್ಳಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.