ADVERTISEMENT

ಹುಂಡೈನಿಂದ ‘ಸ್ಮಾರ್ಟ್ ಕೇರ್ ಕ್ಲಿನಿಕ್’

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2021, 16:33 IST
Last Updated 10 ಡಿಸೆಂಬರ್ 2021, 16:33 IST

ಬೆಂಗಳೂರು: ಹುಂಡೈ ಮೋಟರ್ ಇಂಡಿಯಾ ಕಂಪನಿಯು ‘ಹುಂಡೈ ಸ್ಮಾರ್ಟ್‌ ಕೇರ್‌ ಕ್ಲಿನಿಕ್‌’ ಕಾರ್ಯಕ್ರಮವನ್ನು ಶುಕ್ರವಾರ ಉದ್ಘಾಟಿಸಿದೆ. ಹತ್ತು ದಿನಗಳ ಈ ಕಾರ್ಯಕ್ರಮದಲ್ಲಿ ಕಂಪನಿಯು ತನ್ನ ಗ್ರಾಹಕರಿಗೆ ನಿರ್ವಹಣಾ ಸೇವೆ, ಕಾರಿಗೆ ರಸ್ತೆಬದಿಗಳಲ್ಲಿ ಕೆಲವು ಅಗತ್ಯ ಸೇವೆಗಳನ್ನು ಒದಗಿಸುವುದು ಹಾಗೂ ವರ್ಷಾಂತ್ಯದ ಕೊಡುಗೆಗಳನ್ನು ನೀಡಲಿದೆ.

ಕಾರು ಇನ್ನಷ್ಟು ದಕ್ಷವಾಗಿ ಇರಬೇಕು ಎಂದಾದರೆ ಅದನ್ನು ಕಾಲಕಾಲಕ್ಕೆ ಸೂಕ್ತವಾಗಿ ನಿರ್ವಹಣೆ ಮಾಡುತ್ತಿರಬೇಕು ಎಂಬುದನ್ನು ಗ್ರಾಹಕರಿಗೆ ನೆನಪು ಮಾಡಿಕೊಡುವ ಉದ್ದೇಶದಿಂದ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ ಎಂದು ಕಂಪನಿ ಹೇಳಿದೆ.

ಈ ಕಾರ್ಯಕ್ರಮದ ಅಡಿಯಲ್ಲಿ ಕಾರಿನ ಕೆಲವು ಬಿಡಿಭಾಗಗಳ ಮೇಲೆ ಶೇಕಡ 10ರಷ್ಟು ರಿಯಾಯಿತಿ, ಕೆಲವು ಶುಲ್ಕಗಳಲ್ಲಿ ಶೇಕಡ 20ರಷ್ಟು ರಿಯಾಯಿತಿ ಸೇರಿದಂತೆ ಹಲವು ಕೊಡುಗೆಗಳು ಲಭ್ಯವಾಗಲಿವೆ ಎಂದು ಪ್ರಕಟಣೆ ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.