ADVERTISEMENT

ಫಿನ್‌ಟೆಕ್‌ ವಲಯ | ಭಾರತ ಮುಂಚೂಣಿ: ಡಬ್ಲ್ಯುಇಎಫ್‌ ವರದಿ

ಪಿಟಿಐ
Published 25 ಜೂನ್ 2025, 15:44 IST
Last Updated 25 ಜೂನ್ 2025, 15:44 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ಫಿನ್‌ಟೆಕ್‌ ವಲಯದ ಜಾಗತಿಕ ಪ್ರಮುಖ ಕೇಂದ್ರಗಳ ಪಟ್ಟಿಯಲ್ಲಿ ಭಾರತ ಮುಂಚೂಣಿ ಸ್ಥಾನ ಪಡೆದಿದೆ ಎಂದು ವಿಶ್ವ ಆರ್ಥಿಕ ವೇದಿಕೆಯ (ಡಬ್ಲ್ಯುಇಎಫ್‌) ವರದಿ ಬುಧವಾರ ತಿಳಿಸಿದೆ.

ಭಾರತ, ಬ್ರಿಟನ್ ಮತ್ತು ಅಮೆರಿಕವು ಫಿನ್‌ಟೆಕ್‌ ವಲಯದ ಪ್ರಮುಖ ಕೇಂದ್ರಗಳಾಗಿ ಬೆಳೆಯುತ್ತಿವೆ. ಲಾಭದಾಯಕತೆ ಮತ್ತು ಒಳಗೊಳ್ಳುವಿಕೆಯ ಕಾರಣದಿಂದಾಗಿ ಈ ವಲಯದ ಪ್ರಗತಿ ಸ್ಥಿರವಾಗುತ್ತಿದೆ ಎಂದು ತಿಳಿಸಿದೆ. 

ಫಿನ್‌ಟೆಕ್ ಉದ್ಯಮದ ಪ್ರಮುಖ ಕೇಂದ್ರಗಳ ಪಟ್ಟಿಯಲ್ಲಿ ಬ್ರಿಟನ್, ಭಾರತ, ಅಮೆರಿಕ, ಸಿಂಗಪುರ, ಬ್ರೆಜಿಲ್ ಮತ್ತು ಇಂಡೊನೇಷ್ಯಾ ಇವೆ.

ADVERTISEMENT

ಕೋವಿಡ್‌ ಸಾಂಕ್ರಾಮಿಕ ನಂತರದಲ್ಲಿ ಫಿನ್‌ಟೆಕ್‌ ವಲಯವು ಸದೃಢವಾಗಿದ್ದು, ಸುಸ್ಥಿರ ಪ್ರಗತಿ ಕಾಣುತ್ತಿದೆ. ಸಮೀಕ್ಷೆಯಲ್ಲಿ 240 ಫಿನ್‌ಟೆಕ್ ಸಂಸ್ಥೆಗಳು ಭಾಗಿಯಾಗಿದ್ದವು. ಗ್ರಾಹಕರ ಸಂಖ್ಯೆಯಲ್ಲಿನ ಬೆಳವಣಿಗೆ ಪ್ರಮಾಣವು ಶೇ 37ರಷ್ಟು ಇದೆ, ವರಮಾನ ಹೆಚ್ಚಳ ಶೇ 40ರಷ್ಟು ಮತ್ತು ಲಾಭ ಹೆಚ್ಚಳ ಶೇ 39ರಷ್ಟಿದೆ ಎಂದು ತಿಳಿಸಿವೆ.

ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಪ್ರಮಾಣ ಉದ್ದಿಮೆಗಳು (ಎಂಎಸ್‌ಎಂಇ), ಕಡಿಮೆ ಆದಾಯ ಹೊಂದಿರುವವರು ಮತ್ತು ಮಹಿಳೆಯರು ಫಿನ್‌ಟೆಕ್‌ ಉದ್ಯಮದ ಪ್ರಮುಖ ಗ್ರಾಹಕರಾಗಿದ್ದಾರೆ.

ಕೃತಕ ಬುದ್ಧಿಮತ್ತೆ ಅಳವಡಿಕೆಯು ಕಾರ್ಯಕ್ಷಮತೆಯನ್ನು ಸುಧಾರಿಸುತ್ತಿದೆ. ಶೇ 83ರಷ್ಟು ಫಿನ್‌ಟೆಕ್‌ಗಳು ಗ್ರಾಹಕರಿಗೆ ನೀಡುವ ಸೇವೆಯಲ್ಲಿ ಸುಧಾರಣೆ ಕಂಡಿವೆ ಎಂದು ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.