ADVERTISEMENT

8 ಲಕ್ಷ ಟನ್‌ ಸಕ್ಕರೆ ರಫ್ತು ನಿರೀಕ್ಷೆ

ಪಿಟಿಐ
Published 1 ಮೇ 2025, 14:13 IST
Last Updated 1 ಮೇ 2025, 14:13 IST
ಸಕ್ಕರೆ
ಸಕ್ಕರೆ   

ನವದೆಹಲಿ: ಸೆಪ್ಟೆಂಬರ್ ಅಂತ್ಯದ ವೇಳೆಗೆ ದೇಶದ ಸಕ್ಕರೆ ರಫ್ತು 8 ಲಕ್ಷ ಟನ್ ಆಗುವ ನಿರೀಕ್ಷೆ ಇದೆ ಎಂದು ಕೇಂದ್ರ ಆಹಾರ ಸಚಿವಾಲಯದ ಕಾರ್ಯದರ್ಶಿ ಸಂಜೀವ್ ಚೋಪ್ರಾ ಗುರುವಾರ ಹೇಳಿದ್ದಾರೆ.

ಇಲ್ಲಿಯವರೆಗೆ ದೇಶವು 3 ಲಕ್ಷ ಟನ್ ಸಕ್ಕರೆ ರಫ್ತು ಮಾಡಿದ್ದು, ಸಾಗಣೆಗಾಗಿ ಸುಮಾರು 60 ಸಾವಿರ ಟನ್ ಬಂದರುಗಳಲ್ಲಿದೆ. 2024–25ನೇ ಮಾರುಕಟ್ಟೆ ಋತುವಿನಲ್ಲಿ (ಅಕ್ಟೋಬರ್‌ನಿಂದ ಸೆಪ್ಟೆಂಬರ್‌) 26 ಲಕ್ಷ ಟನ್‌ ಉತ್ಪಾದನೆ ಆಗುವ ನಿರೀಕ್ಷೆ ಇದೆ. ಆದರೆ, ಇದರಲ್ಲಿ ಹೆಚ್ಚಿನದನ್ನು ಈಗಾಗಲೇ ಗಿರಣಿಗಳು (ಮಿಲ್‌ಗಳು) ಉತ್ಪಾದಿಸಿವೆ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT