ADVERTISEMENT

ಚಾಲ್ತಿ ಖಾತೆ ಮಿಗತೆ ₹1.15 ಲಕ್ಷ ಕೋಟಿ

ಪಿಟಿಐ
Published 27 ಜೂನ್ 2025, 14:42 IST
Last Updated 27 ಜೂನ್ 2025, 14:42 IST
ಆರ್‌ಬಿಐ
ಆರ್‌ಬಿಐ   

ಮುಂಬೈ: 2024–25ರ ಮಾರ್ಚ್‌ ತ್ರೈಮಾಸಿಕದಲ್ಲಿ ದೇಶದ ಚಾಲ್ತಿ ಖಾತೆ ಮಿಗತೆ ₹1.15 ಲಕ್ಷ ಕೋಟಿಯಾಗಿದೆ. ಇದು ಜಿಡಿಪಿ ಗಾತ್ರದ ಶೇ 1.3ರಷ್ಟಾಗಿದೆ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಶುಕ್ರವಾರ ತಿಳಿಸಿದೆ. 

2023–24ರ ಆರ್ಥಿಕ ವರ್ಷದ ಇದೇ ಅವಧಿಯಲ್ಲಿ ₹39,326 ಕೋಟಿಯಷ್ಟಾಗಿತ್ತು. ಇದು ಜಿಡಿಪಿಯ ಶೇ 0.5ರಷ್ಟಾಗಿತ್ತು ಎಂದು ತಿಳಿಸಿದೆ. ಕಳೆದ ಡಿಸೆಂಬರ್ ತ್ರೈಮಾಸಿಕದಲ್ಲಿ ಚಾಲ್ತಿ ಖಾತೆ ಕೊರತೆ ₹96,605 ಕೋಟಿಯಾಗಿತ್ತು. 

2024–25ರ ಆರ್ಥಿಕ ವರ್ಷದಲ್ಲಿ ದೇಶದ ಚಾಲ್ತಿ ಖಾತೆ ಕೊರತೆ ₹1.99 ಲಕ್ಷ ಕೋಟಿಯಾಗಿದೆ. 2023–24ರಲ್ಲಿ ₹2.22 ಲಕ್ಷ ಕೋಟಿಯಾಗಿತ್ತು. ಸರಕುಗಳ ವ್ಯಾಪಾರ ಕೊರತೆ ₹5 ಲಕ್ಷ ಕೋಟಿಯಾಗಿದೆ. ಸೇವೆಗಳ ನಿವ್ವಳ ಸ್ವೀಕೃತಿ ₹4.55 ಲಕ್ಷ ಕೋಟಿ ಆಗಿದೆ ಎಂದು ತಿಳಿಸಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.