ADVERTISEMENT

ತೈಲ ಬೇಡಿಕೆ 10 ಲಕ್ಷ ಬ್ಯಾರಲ್‌ ಏರಿಕೆ

ಪಿಟಿಐ
Published 17 ಜೂನ್ 2025, 15:15 IST
Last Updated 17 ಜೂನ್ 2025, 15:15 IST
.
.   

ನವದೆಹಲಿ: ತೈಲ ಬಳಕೆಯಲ್ಲಿ ವಿಶ್ವದಲ್ಲಿ ಮೂರನೆಯ ಸ್ಥಾನದಲ್ಲಿರುವ ಭಾರತವು ಜಾಗತಿಕ ಇಂಧನ ಬಳಕೆ ಹೆಚ್ಚಳದಲ್ಲಿ ದೊಡ್ಡ ಪಾತ್ರ ವಹಿಸಲಿದೆ ಎಂದು ಅಂತರರಾಷ್ಟ್ರೀಯ ಇಂಧನ ಸಂಸ್ಥೆ (ಐಇಎ) ಹೇಳಿದೆ.

ಆರ್ಥಿಕ ಚಟುವಟಿಕೆಗಳ ವಿಸ್ತರಣೆಯ ಕಾರಣದಿಂದಾಗಿ 2030ರ ವೇಳೆಗೆ ಭಾರತದಲ್ಲಿ ತೈಲ ಬಳಕೆಯು ಪ್ರತಿದಿನ 10 ಲಕ್ಷ ಬ್ಯಾರೆಲ್‌ನಷ್ಟು ಹೆಚ್ಚಾಗಲಿದೆ ಎಂದು ಅದು ಅಂದಾಜು ಮಾಡಿದೆ.

ಪ್ರಸಕ್ತ ದಶಕದ ಅಂತ್ಯದ ವೇಳೆಗೆ ಜಾಗತಿಕ ಮಾರುಕಟ್ಟೆಯಲ್ಲಿ ತೈಲದ ಬೇಡಿಕೆಯು 25 ಲಕ್ಷ ಬ್ಯಾರೆಲ್‌ಗಳಷ್ಟು ಹೆಚ್ಚಳ ಕಾಣುವ ನಿರೀಕ್ಷೆ ಇದೆ ಎಂದು ಮಂಗಳವಾರ ಬಿಡುಗಡೆ ಮಾಡಿರುವ ವರದಿಯನ್ನು ಐಇಎ ಹೇಳಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.