ADVERTISEMENT

ಅಗ್ಗದ ಬೆಲೆಗೆ ಜಿಯೊ ಲ್ಯಾಪ್‌ಟಾಪ್‌?

ರಾಯಿಟರ್ಸ್
Published 2 ಅಕ್ಟೋಬರ್ 2022, 16:38 IST
Last Updated 2 ಅಕ್ಟೋಬರ್ 2022, 16:38 IST
   

ನವದೆಹಲಿ: ರಿಲಯನ್ಸ್ ಜಿಯೊ ಕಂಪನಿಯು ‘ಜಿಯೊಬುಕ್‌’ ಹೆಸರಿನಲ್ಲಿ ₹ 15 ಸಾವಿರಕ್ಕೆ ಲ್ಯಾಪ್‌ಟಾಪ್‌ ಬಿಡುಗಡೆ ಮಾಡಲಿದೆ. ಇದರಲ್ಲಿ 4ಜಿ ಸಿಮ್‌ ಕೂಡ ಇರಲಿದೆ.

ಈ ಲ್ಯಾಪ್‌ಟಾಪ್‌ ತಯಾರಿಕೆಗೆ ಕಂಪನಿಯು ಕ್ವಾಲ್ಕಾಮ್ ಮತ್ತು ಮೈಕ್ರೊಸಾಫ್ಟ್ ಜೊತೆ ಒಪ್ಪಂದ ಮಾಡಿಕೊಂಡಿದೆ ಎಂದು ಮೂಲಗಳು ತಿಳಿಸಿವೆ. ಈ ಲ್ಯಾಪ್‌ಟಾಪ್‌ ಸರ್ಕಾರಿ ಸಂಸ್ಥೆಗಳಿಗೆ ಮತ್ತು ಶಾಲೆಗಳಿಗೆ ಈ ತಿಂಗಳಿನಿಂದಲೇ ಲಭ್ಯವಾಗಲಿದೆ. ಇತರರಿಗೆ ಇನ್ನು ಮೂರು ತಿಂಗಳಲ್ಲಿ ಲಭ್ಯವಾಗಲಿದೆ. ಮುಂದಿನ ದಿನಗಳಲ್ಲಿ 5ಜಿ ಆವೃತ್ತಿಯೂ ಸಿಗಲಿದೆ.

ಜಿಯೊಬುಕ್‌ ತಯಾರಿಕೆ ಭಾರತದಲ್ಲಿಯೇ ಆಗಲಿದೆ. ‘ಈ ಲ್ಯಾಪ್‌ಟಾಪ್‌ ಬಿಡುಗಡೆ ಆದ ನಂತರದಲ್ಲಿ ದೇಶದ ಲ್ಯಾಪ್‌ಟಾಪ್‌ ಮಾರುಕಟ್ಟೆಯು ಶೇಕಡ 15ರಷ್ಟು ವಿಸ್ತರಿಸಬಹುದು’ ಎಂದು ಕೌಂಟರ್‌ಪಾಯಿಂಟ್ ಸಂಸ್ಥೆಯ ವಿಶ್ಲೇಷಕ ತರುಣ್ ಪಾಠಕ್ ಹೇಳಿದ್ದಾರೆ.

ADVERTISEMENT

ಜಿಯೊ ಒಎಸ್‌ ಕಾರ್ಯಾಚರಣೆ ವ್ಯವಸ್ಥೆ ಇದರಲ್ಲಿ ಇರಲಿದ್ದು, ಜಿಯೊ ಸ್ಟೋರ್‌ನಿಂದ ಆ್ಯಪ್‌ ಡೌನ್‌ಲೋಡ್ ಮಾಡಿಕೊಳ್ಳಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.