ADVERTISEMENT

2021ರಲ್ಲಿ ಸ್ಮಾರ್ಟ್‌ಫೋನ್‌ ಮಾರಾಟ ಶೇ 11ರಷ್ಟು ಹೆಚ್ಚಳ: ಕೌಂಟರ್‌ಪಾಯಿಂಟ್ ವರದಿ

ಪಿಟಿಐ
Published 31 ಜನವರಿ 2022, 11:20 IST
Last Updated 31 ಜನವರಿ 2022, 11:20 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಭಾರತದಲ್ಲಿ ಸ್ಮಾರ್ಟ್‌ಫೋನ್‌ ಮಾರಾಟವು 2020ಕ್ಕೆ ಹೋಲಿಸಿದರೆ 2021ರಲ್ಲಿ ಶೇಕಡ 11ರಷ್ಟು ಹೆಚ್ಚಾಗಿದ್ದು, ಒಟ್ಟು 16.9 ಕೋಟಿ ಸ್ಮಾರ್ಟ್‌ಫೋನ್‌ಗಳು ಮಾರಾಟ ಆಗಿವೆ ಎಂದು ಸಂಶೋಧನಾ ಸಂಸ್ಥೆ ಕೌಂಟರ್‌ಪಾಯಿಂಟ್‌ ತಿಳಿಸಿದೆ.

2021ರಲ್ಲಿ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯ ವರಮಾನವು ₹ 2.85 ಲಕ್ಷ ಕೋಟಿಯಷ್ಟಾಗಿದ್ದು, 2020ಕ್ಕೆ ಹೋಲಿಸಿದರೆ ಶೇ 27ರಷ್ಟು ಹೆಚ್ಚಳವಾಗಿದೆ.

2021ರಲ್ಲಿ ಭಾರತದ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಕಂಡುಬಂದಿದೆ. ಕೋವಿಡ್‌ನ ಎರಡನೇ ಅಲೆಯ ಪರಿಣಾಮ ಮತ್ತು ಬಿಡಿಭಾಗಗಳ ಕೊರತೆ ಹಾಗೂ ಬೆಲೆ ಏರಿಕೆಯ ನಡುವೆಯೇ ಈ ಮಟ್ಟದ ಬೇಡಿಕೆ ಬಂದಿದೆ ಎಂದು ಸಂಸ್ಥೆಯ ಹಿರಿಯ ಸಂಶೋಧನಾ ವಿಶ್ಲೇಷಕ ಪ್ರಾಚೀರ್ ಸಿಂಗ್ ತಿಳಿಸಿದ್ದಾರೆ.

ADVERTISEMENT

ಪ್ರಮುಖ ಐದು ಬ್ರ್ಯಾಂಡ್‌ಗಳ ಪೈಕಿ ರಿಯಲ್‌ಮಿ ಕಂಪನಿಯು ಡಿಸೆಂಬರ್ ತ್ರೈಮಾಸಿಕದಲ್ಲಿ ಎರಡನೇ ಸ್ಥಾನ ಪಡೆದುಕೊಂಡಿದೆ.

ಪ್ರೀಮಿಯಂ ವಿಭಾಗದಲ್ಲಿ ಶೇ 44ರಷ್ಟು ಪಾಲು ಹೊಂದಿರುವ ಆ್ಯಪಲ್‌ ಕಂಪನಿಯು ಮೊದಲ ಸ್ಥಾನದಲ್ಲಿದೆ. ಒನ್‌ಪ್ಲಸ್‌ 2021ರಲ್ಲಿ ಗರಿಷ್ಠ ಮಾರಾಟ ಕಂಡಿದೆ. ₹ 30 ಸಾವಿರಕ್ಕಿಂತ ಅಧಿಕ ಬೆಲೆಯ ಪ್ರೀಮಿಯಂ ಸ್ಮಾರ್ಟ್‌ಫೋನ್‌ ವಿಭಾಗದಲ್ಲಿ ಶೇ 19ರಷ್ಟು ಮಾರುಕಟ್ಟೆ ಷೇರು ಹೊಂದುವ ಮೂಲಕ ಕಂಪನಿಯು ಎರಡನೇ ಸ್ಥಾನ ಪಡೆದುಕೊಂಡಿದೆ.

ಪ್ರಮುಖ ಬ್ರ್ಯಾಂಡ್‌ಗಳ ಮಾರುಕಟ್ಟೆ ಪಾಲು

ಶಿಯೋಮಿ; 24%

ಸ್ಯಾಮ್ಸಂಗ್; 18%

ವಿವೊ; 15%

ರಿಯಲ್‌ಮಿ; 14%

ಒಪ್ಪೊ; 10%

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.