ADVERTISEMENT

ಜೂನ್‌ ಸಗಟು ಹಣದುಬ್ಬರ ಶೇ 1.81ರಷ್ಟು ಕುಸಿತ

ಪಿಟಿಐ
Published 14 ಜುಲೈ 2020, 13:12 IST
Last Updated 14 ಜುಲೈ 2020, 13:12 IST
ಸಗಟು ಹಣದುಬ್ಬರ
ಸಗಟು ಹಣದುಬ್ಬರ   

ನವದೆಹಲಿ: ಆಹಾರ ಪದಾರ್ಥಗಳ ಬೆಲೆ ಏರಿಕೆಯಾಗಿದ್ದರೂ, ಇಂಧನ, ವಿದ್ಯುತ್‌ ಬೆಲೆ ಇಳಿಕೆಯಿಂದಾಗಿ ಜೂನ್‌ನಲ್ಲಿನ ಸಗಟು ಬೆಲೆ ಆಧರಿಸಿದ ಹಣದುಬ್ಬರವು ಶೇ 1.81ರಷ್ಟು ಇಳಿದಿದೆ.

ಮೇನಲ್ಲಿ ಸಗಟು ಬೆಲೆ ಇಳಿತವು ಶೇ 3.21ರಷ್ಟಿತ್ತು. ತಿಂಗಳ ಸಗಟು ಬೆಲೆ ಸೂಚ್ಯಂಕ ಆಧರಿಸಿದ ವಾರ್ಷಿಕ ಹಣದುಬ್ಬರ ದರವು, ಹಿಂದಿನ ವರ್ಷದ ಇದೇ ಅವಧಿಯಲ್ಲಿನ ಶೇ 2.02ಗೆ ಹೋಲಿಸಿದರೆ (–) ಶೇ 1.82ರಷ್ಟಾಗಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯವು ತಿಳಿಸಿದೆ.

ಜೂನ್‌ನಲ್ಲಿ ಆಹಾರ ಪದಾರ್ಥಗಳ ಹಣದುಬ್ಬರವು ಮೇನಲ್ಲಿನ ಶೇ 1.13ಕ್ಕೆ ಹೋಲಿಸಿದರೆ ಶೇ 2.04ರಷ್ಟಾಗಿದೆ. ಇಂಧನ ಮತ್ತು ವಿದ್ಯುತ್‌ಗಳ ಬೆಲೆ ಇಳಿಕೆಯು ಮೇನಲ್ಲಿನ ಶೇ 19.83ಗೆ ಹೋಲಿಸಿದರೆ ಜೂನ್‌ನಲ್ಲಿ ಶೇ 13.60ರಷ್ಟಾಗಿದೆ.

ADVERTISEMENT

ತಯಾರಿಕಾ ಸರಕುಗಳ ಹಣದುಬ್ಬರವು ಮೇನಲ್ಲಿನ ಶೇ 0.42 ಬೆಲೆ ಇಳಿಕೆಗೆ ಹೋಲಿಸಿದರೆ ಶೇ 0.08ರಷ್ಟಾಗಿದೆ.

ಏಪ್ರಿಲ್‌ನ ಪರಿಷ್ಕೃತ ಸಗಟು ಹಣದುಬ್ಬರವು ಶೇ 1.57ರಷ್ಟಾಗಿದೆ ಎಂದು ಸಚಿವಾಲಯ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.