ADVERTISEMENT

ಐ.ಟಿ. ಹೂಡಿಕೆ ಸೆಳೆಯಲಿದೆ ಇಂದೋರ್‌: ಶಿವರಾಜ್ ಸಿಂಗ್ ಚೌಹಾಣ್

​ಪ್ರಜಾವಾಣಿ ವಾರ್ತೆ
Published 11 ಜನವರಿ 2023, 15:32 IST
Last Updated 11 ಜನವರಿ 2023, 15:32 IST
ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಇಂದೋರ್‌ನಲ್ಲಿ ಜಾಗತಿಕ ಹೂಡಿಕೆದಾರರ ಶೃಂಗ ಉದ್ಘಾಟಿಸಿದರು.
ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಇಂದೋರ್‌ನಲ್ಲಿ ಜಾಗತಿಕ ಹೂಡಿಕೆದಾರರ ಶೃಂಗ ಉದ್ಘಾಟಿಸಿದರು.   

ಬೆಂಗಳೂರು: ದೇಶದ ಮಾಹಿತಿ ತಂತ್ರಜ್ಞಾನ ವಲಯದ ಉದ್ಯಮಗಳು ಮುಂದಿನ ದಿನಗಳಲ್ಲಿ ಇಂದೋರ್‌ನತ್ತ ಮುಖ ಮಾಡಲಿವೆ ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇಂದೋರ್‌ನಲ್ಲಿ ಬುಧವಾರ ಆರಂಭವಾದ ಹೂಡಿಕೆದಾರರ ಸಮಾವೇಶದ ಸಂದರ್ಭದಲ್ಲಿ ಅವರು ಕೈಗಾರಿಕೋದ್ಯಮಿಗಳು ಮತ್ತು ಹೂಡಿಕೆದಾರರ ಜೊತೆಗಿನ ಮಾತುಕತೆಯಲ್ಲಿ ಈ ಮಾತು ಹೇಳಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

‘ಸ್ವಚ್ಛತೆ ಹಾಗೂ ಹೆಚ್ಚು ಉತ್ತಮವಾದ ಕೆಲಸದ ವಾತಾವರಣವನ್ನು ನಾವು ಒಂದು ಬ್ರ್ಯಾಂಡ್ ರೀತಿಯಲ್ಲಿ ಬೆಳೆಸಿದ್ದೇವೆ. ಕೈಗಾರಿಕೆಗಳಿಗೆ ಮತ್ತು ಹೂಡಿಕೆಗಳಿಗೆ ಸುಲಭವಾದ ಪ್ರಕ್ರಿಯೆಗಳು, ಪ್ರೋತ್ಸಾಹದಾಯಕ ಧೊರಣೆ ಮತ್ತು ಉತ್ತಮ ಸಂಪರ್ಕ ಸೌಲಭ್ಯವು ನಮ್ಮ ರಾಜ್ಯವನ್ನು ಎಲ್ಲ ವಲಯಗಳಲ್ಲಿ ಹೂಡಿಕೆಗೆ ಸೂಕ್ತವಾದ ತಾಣವನ್ನಾಗಿಸಿವೆ’ ಎಂದು ಅವರು ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.